alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಗೆಯಲ್ಲಿನ್ನು ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ ಸವಾರಿ

ವಾರಣಾಸಿ: ನೀವು ಇನ್ನು ಕಾಶಿಗೆ ತೆರಳಿದರೆ ಗಂಗಾನದಿಯಲ್ಲಿ ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ (ಮಿನಿ ಹಡಗು) ಮೂಲಕ 84 ಘಾಟ್ ದರ್ಶನ ಮಾಡಬಹುದು.

ನೂತನ ಸೇವೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದ್ದಾರೆ. ಫೈವ್ ಸ್ಟಾರ್ ಮಾದರಿಯ ಇಂಥ ಸೇವೆ ಭಾರತದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಕೋಲ್ಕತ್ತಾ ಮೂಲದ ಕಂಪೆನಿ ಈ ಕ್ರೂಸ್ ಅನ್ನು ನಿರ್ಮಿಸಿದ್ದು, 30 ಮೀಟರ್ ಉದ್ದ ಹೊಂದಿದೆ. ಒಂದು ಬಾರಿಗೆ 110 ಪ್ರಯಾಣಿಕರನ್ನು ಅದು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಡೆಕ್ ಹವಾನಿಯಂತ್ರಿತವಾಗಿದ್ದು, ಡೆಕ್ ಮೇಲ್ಭಾಗ ಜನರು ಕುಳಿತು ವೀಕ್ಷಣೆಗೆ ಅವಕಾಶವಿರುತ್ತದೆ. ಜತೆಗೆ ಅದರಲ್ಲಿ ರೆಸ್ಟೋರೆಂಟ್, ಜೈವಿಕ ಶೌಚಾಲಯ, ಟಿವಿ ಸೇವೆ, ವೈಫೈ ಸಹ ಇರಲಿದೆ. ಒಂದು ಪ್ರವಾಸಕ್ಕೆ ಜಿಎಸ್ಟಿ ಹೊರತುಪಡಿಸಿ 750 ರೂಪಾಯಿ, ರುದ್ರಾಭಿಷೇಕ ಪಾಕೇಜ್ 75 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.

ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಒಟ್ಟು ಎರಡು ಗಂಟೆ ಅವಧಿಯ 12 ಕಿ.ಮೀ. ಪ್ರವಾಸ ಇದಾಗಿದ್ದು, ಸಂಜೆ ಪ್ರವಾಸದಲ್ಲಿ ಗಂಗಾರತಿ ವೀಕ್ಷಿಸಲು ಅವಕಾಶವಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...