alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳವಾದಲ್ಲಿ ‘She –Box’ ಗೆ ಕೊಡಿ ದೂರು

maneka-g

ನವದೆಹಲಿ: ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವಾದಲ್ಲಿ ದೂರು ನೀಡಲು ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಕಲ್ಪಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಕಿರುಕುಳವಾದಲ್ಲಿ She –Box(ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ ಬಾಕ್ಸ್)ಗೆ ದೂರು ಸಲ್ಲಿಸಬಹುದಾಗಿದೆ.

ದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಈ ಪೋರ್ಟಲ್ ಗೆ ಚಾಲನೆ ನೀಡಿದ ಸಚಿವೆ ಮನೇಕಾ ಗಾಂಧಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಸ್ವರೂಪ ಮತ್ತು ಪ್ರಮಾಣ ಅಂದಾಜು ಮಾಡುವ ಉದ್ದೇಶದಿಂದ ಶೀಘ್ರವೇ ರಾಷ್ಟ್ರೀಯ ಸಮೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ದೂರು ಸಲ್ಲಿಸಲು ಅವಕಾಶವಿದ್ದು, ಮುಂದಿನ ಹಂತದಲ್ಲಿ ಖಾಸಗಿ ಕಂಪನಿಗಳ ಮಹಿಳಾ ನೌಕರರು ಕೂಡ ದೂರು ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶೀಘ್ರವೇ ಹಲವು ಬದಲಾವಣೆಗಳೊಂದಿಗೆ She –Box(Sexual Harassment Electronic –Box) ಕಾರ್ಯಾಚರಿಸಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...