alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚಾಗ್ತಿದೆ ಪ್ಲಾಸ್ಟಿಕ್ ಹಣ್ಣು, ತರಕಾರಿಗಳ ಹಾವಳಿ

cabbage-and-weight-loss

ಈಗ ಎಲ್ಲಾ ವಸ್ತುಗಳೂ ನಕಲಿ. ಹಣ್ಣು ಮತ್ತು ತರಕಾರಿ ಕೂಡ ಅದರಿಂದ ಹೊರತಾಗಿಲ್ಲ. ಯಾವುದು ಅಸಲಿ ಯಾವುದು ನಕಲಿ ಅನ್ನೋದನ್ನು ಪತ್ತೆ ಮಾಡೋದೆ ಕಷ್ಟವಾಗಿಬಿಟ್ಟಿದೆ. ಭಾರತದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಹಣ್ಣು ಮತ್ತು ತರಕಾರಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

ದೆಹಲಿಯ ಮಹಿಳೆಯೊಬ್ಬರು ನಕಲಿ ಕ್ಯಾಬೇಜ್ ಒಂದನ್ನು ಪತ್ತೆ ಮಾಡೋದು ಹೇಗೆ ಅನ್ನೋ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ದೆಹಲಿಯ ಜನಪ್ರಿಯ ಮಳಿಗೆಯೊಂದರಿಂದ್ಲೇ ರುಚಿ ಟಂಡನ್ ಕ್ಯಾಬೇಜ್ ಖರೀದಿಸಿ ತಂದಿದ್ರು.

ಸಖತ್ ಫ್ರೆಶ್ ಆಗಿದ್ದ ಕ್ಯಾಬೇಜ್ ನೋಡಲು ಥೇಟ್ ಅಸಲಿಯಂತೆಯೇ ಇತ್ತು. ಆದ್ರೆ ಪ್ಲಾಸ್ಟಿಕ್ ಇರಬಹುದಾ ಪರೀಕ್ಷಿಸಿ ನೋಡೋಣ ಅಂತಾ ರುಚಿ ಟಂಡನ್, ಅದನ್ನು ಬೆಂಕಿಯಲ್ಲಿಟ್ಟು ಸುಟ್ಟಿದ್ದಾರೆ. ಆದ್ರೆ ಅದು ಪ್ಲಾಸ್ಟಿಕ್ ಕ್ಯಾಬೇಜ್ ಆಗಿದ್ರಿಂದ ಸ್ವಲ್ಪ ಕೂಡ ಸುಟ್ಟಿಲ್ಲ. ಸ್ವಲ್ಪ ಕರಗಿದಂತಾಗಿ ಗಟ್ಟಿಯಾಗಿದೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದೇ ರುಚಿ ಟಂಡನ್ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸೂಪರ್ ಮಾರ್ಕೆಟ್ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಕೂಡ ಹಣ್ಣು ತರಕಾರಿ ಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಇಲ್ಲದೇ ಹೋದ್ರೆ ಈ ಪ್ಲಾಸ್ಟಿಕ್ ಹಣ್ಣು ತರಕಾರಿಗಳು ನಿಮ್ಮ ಜೀವಕ್ಕೇ ಮಾರಕವಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...