alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಕ್ಮನ್ ಗೋ ಗೇಮ್ ವಿರುದ್ಧ ಪಿಐಎಲ್ !

Pokemon-eggsಪೂಜಾ ಸ್ಥಳಗಳಲ್ಲಿ ಮೊಟ್ಟೆಯಾಕಾರದ ವಸ್ತು ತೋರಿಸಿದ್ರೆ ಕೆಲವು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಅಡ್ಡಿಯುಂಟಾಗುತ್ತದೆ ಎಂದು ಆರೋಪಿಸಿ ಪೋಕ್ಮನ್ ಗೋ ಗೇಮ್ ನಡೆಸುತ್ತಿರುವ ಡೆವಲಪರ್ ಗಳ ವಿರುದ್ಧ ಗುಜರಾತ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.

ಅನಿಲ್ ದಾನೆ ಎಂಬುವವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಗೇಮ್ ಡೆವಲಪರ್ ನೈಂಟಿಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆ. ಪೂಜಾ ಸ್ಥಳಗಳಲ್ಲಿ ಪೋಕ್ಮನ್ ಗೋ ಆಟದ ಚಿಹ್ನೆ ಮೊಟ್ಟೆಗಳನ್ನು ತೋರಿಸಲಾಗುತ್ತಿದೆ. ಮೊಟ್ಟೆ ಮಾಂಸಾಹಾರವೆಂದು ಪರಿಗಣಿಸಲ್ಪಡುತ್ತದೆ. ಹಿಂದೂಗಳು ಮತ್ತು ಜೈನರ ಪೂಜಾ ಸ್ಥಳಗಳಲ್ಲಿ ಅವುಗಳನ್ನು ತರುವುದು ಧರ್ಮವಿರೋಧಿ ಅನ್ನೋದು ಅನಿಲ್ ದಾನೆ ಅವರ ವಾದ.

ಮೊಟ್ಟೆಯಾಕಾರದ ವಸ್ತುವನ್ನು ಬಳಸುತ್ತಾರೆಂಬ ಕಾರಣಕ್ಕೆ ಪಿಐಎಲ್ ಹಾಕಿರುವುದು ಹಾಸ್ಯಾಸ್ಪದ ಎಂಬ ಅಭಿಪ್ರಾಯಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಕೋರ್ಟ್ ಅಭಿಪ್ರಾಯವೇನು ಅನ್ನೋದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...