alex Certify
ಕನ್ನಡ ದುನಿಯಾ       Mobile App
       

Kannada Duniya

ಮದುರೈ ಮೀನಾಕ್ಷಿ ದೇವಾಲಯದಲ್ಲಿ ಭಕ್ತರಿಗೆ ಉಚಿತ ವೈಫೈ

temple

ಮದುರೈ ಮೀನಾಕ್ಷಿ ದೇವಾಲಯಕ್ಕೆ ಬರುವ ಭಕ್ತರಿಗೆ ಇನ್ಮೇಲೆ ಉಚಿತ ಇಂಟರ್ನೆಟ್ ಸೇವೆ ಸಿಗಲಿದೆ. ಯಾಕಂದ್ರೆ ದೇವಾಲಯದಲ್ಲಿ ಫ್ರೀ ವೈಫೈ ಅಳವಡಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗ್ಲಿ ಅನ್ನೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಉಚಿತ ವೈಫೈ ಸೌಲಭ್ಯವನ್ನು ಪರಿಚಯಿಸಿವೆ.

ದೇಗುಲದ ಬಳಿಯಿರುವ ಚಪ್ಪಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಭಕ್ತರಿಗೆ ವೈಫೈ ಅಲರ್ಟ್ ಲಭ್ಯವಾಗಲಿದೆ. ತಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಕೊಟ್ಟು ಭಕ್ತರು ವೈಫೈ ಕನೆಕ್ಷನ್ ಪಡೆಯಬಹುದು. ಕಳೆದ ಮಂಗಳವಾರ ಈ ಸೇವೆಯನ್ನು ಪರಿಚಯಿಸಲಾಗಿತ್ತು, ಮೊದಲ ಹತ್ತು ದಿನಗಳ ಕಾಲ ಪ್ರವಾಸಿಗರು ದೇವಾಲಯದಿಂದ 150 ಮೀಟರ್ ದೂರದವರೆಗೆ 15 ನಿಮಿಷಗಳ ಕಾಲ ಉಚಿತ ಇಂಟರ್ನೆಟ್ ಪಡೆಯಬಹುದು.

ನಂತರ ಭಕ್ತರು ದಿನಕ್ಕೆ 120 ಎಂಬಿಯಷ್ಟು ಇಂಟರ್ನೆಟ್ ಪಡೆದುಕೊಳ್ಳಬಹುದು. ವೈಫೈ ಸೌಲಭ್ಯದ ಮೂಲಕ ಭಕ್ತರು ಇ-ಪೂಜೆಯನ್ನು ಕೂಡ ಬುಕ್ ಮಾಡಿಕೊಳ್ಳಬಹುದಾಗಿದೆ. ದೇವಾಲಯದ ಇತಿಹಾಸ ಮತ್ತು ಮಹತ್ವವನ್ನು ತಿಳಿಸಿಕೊಡುವ ಆ್ಯಪ್ ಒಂದನ್ನು ಕೂಡ ಲಾಂಚ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...