alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಡೇಲಿ ಅಲಿ ಚಾಲೆಂಜ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಹೊಸ ಹಾಗೂ ಆಸಕ್ತಿದಾಯಕ ಘಟನೆಗಳು ನಡೆಯುತ್ತಿರುತ್ತವೆ. ಈಗ ಇನ್ನೊಂದು ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೇಲಿ ಅಲಿ ಚಾಲೆಂಜ್ ಎಂದು ಅದಕ್ಕೆ ಹೆಸರಿಡಲಾಗಿದೆ. ಇಂಗ್ಲೆಂಡ್ ಯುವ ಫೀಲ್ಡರ್ ಡೇಲಿ ಅಲಿ ಹೆಸರಿನಲ್ಲಿ ಈ ಚಾಲೆಂಜ್ ಪ್ರಸಿದ್ಧಿ ಪಡೆಯುತ್ತಿದೆ.

ಡೇಲಿ ಅಲಿ ಕೈ ಬೆರಳು ಕಣ್ಮೆಲಿಟ್ಟು ವಿಭಿನ್ನವಾಗಿ ಸಂತೋಷವನ್ನು ಹಂಚಿಕೊಳ್ತಾರೆ. ಈಗ ಅವ್ರ ಶೈಲಿಯನ್ನು ಜನರು ಫಾಲೋ ಮಾಡ್ತಿದ್ದಾರೆ. ಕೈ ಬೆರಳುಗಳನ್ನು ಕಣ್ಣಿನ ಬಳಿ ತಂದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದಕ್ಕೆ ಡೇಲಿ ಅಲಿ ಚಾಲೆಂಜ್ ಎಂದು ಹೆಸರಿಡಲಾಗಿದೆ.

ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್, ಡೇಲಿ ಅಲಿ ಶೈಲಿಯಲ್ಲಿ ಮೈದಾನದಲ್ಲಿ ಸಂತೋಷ ಆಚರಿಸಿದ್ದರು. ರಾಹುಲ್  ನಂತ್ರ ಡೇಲಿ ಅಲಿ ಶೈಲಿ ಮತ್ತಷ್ಟು ಜನಪ್ರಿಯ ಪಡೆದಿದೆ. ಮಾಡಲು ಸುಲಭ ಹಾಗೂ ಯಾವುದೇ ಅಪಾಯವಿಲ್ಲ. ಹಾಗಾಗಿ ಅನೇಕರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...