alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಮತ್ತೊಬ್ಬ ಸೈನಿಕನ ವಿಡಿಯೋ

crpf-ja

ನವದೆಹಲಿ: ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು, ಕೆಲಸ ಮಾಡುತ್ತಿರುವ ಸೈನಿಕರಿಗೆ ನೀಡುತ್ತಿರುವ ಕಳಪೆ ಊಟದ ಕುರಿತಾಗಿ ಬಿ.ಎಸ್.ಎಫ್. ಯೋಧ ತೇಜ್ ಬಹದ್ದೂರ್ ಯಾದವ್ ಸೆಲ್ಫಿ ವಿಡಿಯೋದಲ್ಲಿ ಬಹಿರಂಗಪಡಿಸಿದ್ದರು.

ತೇಜ್ ಬಹದ್ದೂರ್ ವಿಡಿಯೋ ದೇಶಾದ್ಯಂತ ಸಂಚಲನ ಮೂಡಿಸಿದ ಬೆನ್ನಲ್ಲೇ, ಮತ್ತೊಬ್ಬ ಯೋಧನ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ಸಿ.ಆರ್.ಪಿ.ಎಫ್. ಯೋಧ ಜೀತ್ ಸಿಂಗ್ ತಮಗೆ ನೀಡಲಾಗುತ್ತಿರುವ ಸೌಲಭ್ಯಗಳು ಸರಿಯಾಗಿಲ್ಲ ಎಂಬುದನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.

ಮಥುರಾ ನಿವಾಸಿ ಜೀತ್ ಸಿಂಗ್, ಚುನಾವಣೆ, ದೇವಾಲಯ, ಮಂದಿರ, ಮಸೀದಿ ಕಾಡು- ಮೇಡು, ಹಗಲು- ರಾತ್ರಿಯೆಲ್ಲಾ ನಾವು ದೇಶದ ಯಾವುದೇ ಮೂಲೆಯಲ್ಲಾದರೂ ಕೆಲಸ ಮಾಡುತ್ತೇವೆ. ಆದರೆ, ನಮಗೆ ಸಿಗುತ್ತಿರುವ ಸೌಲಭ್ಯಗಳು ಅತ್ಯಲ್ಪ ಎಂದು ದೂರಿದ್ದಾರೆ.

ಸೈನಿಕರಿಗೆ ಪೆನ್ಷನ್ ಕೊಡಲಾಗುತ್ತದೆ. ಉಪನ್ಯಾಸಕರಿಗೆ 50-60 ಸಾವಿರ ರೂ. ವೇತನ ಕೊಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ರಜೆ ಸಿಗುತ್ತದೆ. ಆದರೆ, ಸಿ.ಆರ್.ಪಿ.ಎಫ್. ಯೋಧರಿಗೆ ಅಂತಹ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ನಾವು ಮಾಜಿ ಸೈನಿಕರಿಗೆ ನೀಡುವ ಸೌಲಭ್ಯ ಪಡೆಯಲು ಅರ್ಹರಲ್ಲ. ಔಷಧ ಸಿಗಲ್ಲ ಎಂದು ಹೇಳಿರುವ ಜೀತ್ ಸಿಂಗ್, ಸಿ.ಆರ್.ಪಿ.ಎಫ್. ಯೋಧರ ಬೇಡಿಕೆ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...