alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಆನ್ಲೈನ್ ನಲ್ಲಿ ಸಿಗ್ತಿದೆ ಹಿಮಾಲಯದ ಶುದ್ಧ ಗಾಳಿ

ಶುದ್ಧ ಗಾಳಿ ಸಿಗೋದು ಅಪರೂಪ ಎನ್ನುವಂತಾಗಿದೆ. ದಿನ ದಿನಕ್ಕೂ ವಾತಾವರಣ ಹದಗೆಡುತ್ತಿದೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನರು ಮಲಿನ ಗಾಳಿ ಕುಡಿದು ಅನಾರೋಗ್ಯಕ್ಕೊಳಗಾಗ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಶುದ್ಧ ಗಾಳಿ ತೆಗೆದುಕೊಳ್ಳಲು ಬಯಸಿದ್ರೆ ಆನ್ಲೈನ್ ಮೂಲಕ ಗಾಳಿ ಖರೀದಿ ಮಾಡಿ.

ಹಿಮಾಲಯದ ಶುದ್ಧ ಗಾಳಿ ಈಗ ನಿಮ್ಮ ಮನೆಗೆ ಬರಲಿದೆ. ಆನ್ಲೈನ್ ಮೂಲಕ ಗಾಳಿ ಮಾರಾಟ ಶುರುವಾಗಿದೆ. ದೇಶಿ ಹಾಗೂ ವಿದೇಶಿ ಕಂಪನಿಗಳು ಹಿಮಾಲಯದ ಶುದ್ಧ ಗಾಳಿಯನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡ್ತಿವೆ. ಯುರೋ ಹಿಮಾಲಯನ್ ಏರ್ ಕಂಪನಿ 10 ಲೀಟರ್ ಶುದ್ಧ ಗಾಳಿಗೆ 550 ರೂಪಾಯಿ ಪಡೆಯುತ್ತಿದೆ. ನೀವು ಈ ಬಾಟಲಿಯಲ್ಲಿ ತುಂಬಿದ ಗಾಳಿಯಿಂದ 160 ಬಾರಿ ಉಸಿರಾಡಬಹುದಾಗಿದೆ.

ಬಾಟಲಿ ಜೊತೆ ಮಾಸ್ಕ್ ಕೂಡ ಕಂಪನಿ ನೀಡ್ತಿದೆ. ಉತ್ತರಾಖಂಡದ ಚಮೋಲಿ ಗಾಳಿಯನ್ನು ಇದ್ರಲ್ಲಿ ತುಂಬಲಾಗಿದೆ ಎಂದು ಕಂಪನಿ ಹೇಳಿದೆ. ಭಾರತೀಯರು ಭಾರತದ ಗಾಳಿಯನ್ನು ವಿದೇಶಿ ಕಂಪನಿಗಳಿಂದ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ. ಕೆನಡಾ ಹಾಗೂ ಆಸ್ಟ್ರೇಲಿಯಾ ಕಂಪನಿಗಳು ಕೂಡ ಶುದ್ಧ ಗಾಳಿಯನ್ನು ಭಾರತದಲ್ಲಿ ಮಾರಾಟ ಮಾಡಲು ಶುರು ಮಾಡಿವೆ.

ಆಸ್ಟ್ರೇಲಿಯಾ ಕಂಪನಿ AUZAIR ಎರಡು ಗಾತ್ರದ ಬಾಟಲಿ ಮಾರಾಟ ಮಾಡ್ತಿದೆ.7 ಲೀಟರ್ ಶುದ್ಧ ಗಾಳಿ ಬೆಲೆ 1499 ರೂಪಾಯಿಯಾಗಿದ್ದು, 15 ಲೀಟರ್ ಗಾಳಿ ಬೆಲೆ 1999 ರೂಪಾಯಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...