alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಯ್ಯಪ್ಪ’ನ ಭಕ್ತರಿಗೆ ಶಾಕಿಂಗ್ ನ್ಯೂಸ್…!

ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇನ್ನು ಮುಂದೆ ಅಯ್ಯಪ್ಪನ ದರ್ಶನಕ್ಕೆ ತೆರಳುವ ಮಹಿಳಾ ಭಕ್ತರು ವಯಸ್ಸಿನ ದೃಢೀಕರಣ ಪತ್ರವನ್ನು ತೋರಿಸಬೇಕಿದೆ.

ಶಬರಿ ಮಲೆ ದರ್ಶನಕ್ಕೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಟ್ರಾವಂಕೂರ್ ದೇವಸ್ವಮ್ ಬೋರ್ಡ್(ಟಿ.ಡಿ.ಬಿ.) ನಿರ್ಬಂಧ ಹೇರಿದೆ. 10 ರಿಂದ 50 ವರ್ಷದ ಹೆಣ್ಣು ಮಕ್ಕಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದೇವಾಲಯಕ್ಕೆ ಬರುವ ಮಹಿಳಾ ಭಕ್ತರು ವಯಸ್ಸಿನ ದೃಢೀಕರಣ ನೀಡುವಂತೆ ಸೂಚಿಸಲಾಗಿದೆ.

3 ತಿಂಗಳ ಅವಧಿಯ ವಾರ್ಷಿಕ ಧಾರ್ಮಿಕ ಕಾರ್ಯಗಳು ಜನವರಿ 14 ರ ಮಕರ ಸಂಕ್ರಾಂತಿಯ ದಿನ ಮುಕ್ತಾಯವಾಗಲಿದೆ. ಈ ದಿನಗಳಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುತ್ತಾರೆ.

ದರ್ಶನಕ್ಕೆ ಬರುವ ಭಕ್ತರು ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಗುರುತಿನ ಪತ್ರವನ್ನು ತೋರಿಸಬೇಕು. ಮಹಿಳೆಯರು ವಯಸ್ಸಿನ ದೃಢೀಕರಣ ನೀಡಬೇಕೆಂದು ಟ್ರಾವಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎ. ಪದ್ಮಕುಮಾರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...