alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಡೋ-ಪಾಕ್ ಗಡಿಯಲ್ಲಿ ಸೆಲ್ಫಿ ಗೋಪುರ…!

ಇಂಡೋ-ಪಾಕ್ ಗಡಿಯಲ್ಲೊಂದು ಸೆಲ್ಫಿ ತೆಗೆದು ಫ್ರೆಂಡ್ಸ್ ಗೆಲ್ಲಾ ತೋರಿಸಬೇಕು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಬೇಕು ಎಂಬಿತ್ಯಾದಿ ಆಸೆಗಳು ಯಾರಿಗಿರುವುದಿಲ್ಲ ಹೇಳಿ. ಆದರೆ ಅದು ಸಾಧ್ಯಾನಾ? ಸುಖಾಸುಮ್ಮವೇ ನಮ್ಮ ಸೈನಿಕರು ಅಲ್ಲಿ ಸುತ್ತಾಡಲು ಬಿಡ್ತಾರಾ? ಕೊಂಚ ಯಾಮಾರಿದರೂ ಪಾಕಿಗಳು ಸುಮ್ಮವೇ ಬಿಟ್ಟಾರಾ ಎಂಬಿತ್ಯಾದಿ ಸಂದೇಹಗಳಿದ್ದರೆ ಈಗಲೇ ಬಿಟ್ಟು ಬಿಡಿ.

ಯಾಕೆಂದರೆ ಇನ್ನು ಇದು ಸಾಧ್ಯ. ಇದೀಗ ಗುಜರಾತ್ ನ ನಾಡಾಬೆತ್ ನಲ್ಲಿರುವ ಭಾರತ- ಪಾಕ್ ಗಡಿಯಲ್ಲಿನ ಝಿರೋ ಪಾಯಿಂಟ್ ನಲ್ಲಿ ಗಡಿರಕ್ಷಣಾ ಪಡೆ(ಬಿಎಸ್ಎಫ್) ಸೆಲ್ಫಿ ಗೋಪುರವನ್ನು ನಿರ್ಮಿಸುತ್ತಿದೆ. ಮಿಲಿಟರಿಯವರು ವೀಕ್ಷಣಾ ಗೋಪುರ ನಿರ್ಮಿಸುವುದು ಕೇಳಿದ್ದೇವೆ. ಅದು ಅವರ ಅನುಕೂಲಕ್ಕಾಗಿ ಆದರೆ ಈ ಸೆಲ್ಫಿ ಗೋಪುರ ನಿರ್ಮಿಸುತ್ತಿರುವುದು ಪ್ರವಾಸಿಗರಿಗಾಗಿ.

ಪಾಕಿಸ್ತಾನದ ಗಡಿರೇಖೆಯಿಂದ ಕೇವಲ 150 ಮೀ. ದೂರದಲ್ಲಿರುವ ಈ ಮೂರಂತಸ್ತಿನ ಸೆಲ್ಫಿ ಟವರಿನಲ್ಲಿ ಇನ್ನು ಪ್ರವಾಸಿಗರು ತಮಗೆ ಬೇಕೆಂದ ಹಾಗೆ ಫೋಟೋಗಳನ್ನು, ಸೆಲ್ಫಿಗಳನ್ನು ಕ್ಲಿಕ್ಕಿಸಬಹುದು. ಮಿಲಿಟರಿ ಪಡೆ ಗತ್ತಿನಿಂದ ಕವಾಯತು ಪ್ರದರ್ಶನ ನೀಡುವ ವಾಗಾ ಗಡಿ ಪ್ರವಾಸಿಗರ ಆಕರ್ಷಣಾ ಕೇಂದ್ರ ಆಗಿರುವ ಹಾಗೇ ಈ ಸ್ಥಳವನ್ನೂ ಪ್ರವಾಸಿಗರ ನೆಚ್ಚಿನ ಸ್ಥಳವಾಗಿಸಲು ಗುಜರಾತ್ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ತಯಾರಿ ನಡೆಸಿದೆ.

ಇಲ್ಲಿ ಸೀಮಾ ದರ್ಶನ್ ಎಂಬ ಪ್ರವಾಸದ ಪ್ಯಾಕೇಜನ್ನು ಪರಿಚಯಿಸಲಾಗುತ್ತಿದ್ದು, ಸೀಮಾರೇಖೆಯ ಬಳಿ ಕರೆದುಕೊಂಡು ಹೋಗಲಾಗುತ್ತಿದೆ. ಈ ಯೋಜನೆಗೆಂದೇ ಗುಜರಾತ್ ಸರ್ಕಾರ ಸುಮಾರು 39 ಕೋಟಿ ರೂ. ವ್ಯಯಿಸಿ ನಾಡಾಬೆತ್ ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ನಿರ್ದಿಷ್ಟ ವಲಯದೊಳಗೆ ಸ್ವಚ್ಛಂದವಾಗಿ ತಿರುಗಾಡಬಹುದು. ಇಲ್ಲಿನ ಟವರಿನಿಂದ ಗೋಚರಿಸುವ ಪಾಕಿಸ್ತಾನದ ಗ್ರಾಮವನ್ನು ಹಿನ್ನೆಲೆಯಲ್ಲಿಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...