alex Certify
ಕನ್ನಡ ದುನಿಯಾ       Mobile App
       

Kannada Duniya

ನೊಯ್ಡಾದಲ್ಲಿದ್ದಾರೆ ಪಿಜ್ಜಾ ಕದಿಯೋ ಕಳ್ಳರು

pizza

ನೊಯ್ಡಾದಲ್ಲಿ ಕಳ್ಳತನ, ದರೋಡೆ ಸರ್ವೇಸಾಮಾನ್ಯ. ಆದ್ರೆ ಕಳ್ಳರು ಮೊಬೈಲ್, ಹಣ, ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮಾತ್ರ ಕದಿಯುತ್ತಾರೆ ಅಂದ್ಕೋಬೇಡಿ. ಪಿಜ್ಜಾ ಕೂಡ ಕಳ್ಳರ ಹಾಟ್ ಫೇವರಿಟ್. ನೊಯ್ಡಾದಲ್ಲಿ ಪ್ರತಿತಿಂಗಳು 8-10 ಪಿಜ್ಜಾ ಕಳವು ಪ್ರಕರಣಗಳು ನಡೆಯುತ್ತವೆ. ವಾರಕ್ಕೆ ಕಡಿಮೆ ಅಂದ್ರೂ ಒಂದು ಡಜನ್ ಪಿಜ್ಜಾ ಕಳ್ಳರ ಪಾಲಾಗ್ತಿದೆ.

ಡೊಮಿನೋಸ್ ಪಿಜ್ಜಾದ ಡೆಲಿವರಿ ಬಾಯ್ಸ್ ಅಂತೂ ಕಳ್ಳರ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಗ್ರಾಹಕರಿಗೆ ಕೊಡಲು ತೆಗೆದುಕೊಂಡು ಹೋಗುವ 4-5 ಪಿಜ್ಜಾ ಜೊತೆಗೆ ಡೆಲಿವರಿ ಬಾಯ್ ಬಳಿ ಇರುವ ಹಣ, ಮೊಬೈಲ್ ಎಲ್ಲವನ್ನೂ ಕಳ್ಳರು ಕಿತ್ತುಕೊಳ್ತಿದ್ದಾರೆ. ಡೆಲಿವರಿ ಬಾಯ್ ಗಳು ಗಾಡಿ ನಿಲ್ಲಿಸಿ ಅಡ್ರೆಸ್ ಹುಡುಕುವಷ್ಟರಲ್ಲಿ ಬೈಕ್ ನಲ್ಲಿ ಬಂದ ಕಳ್ಳರು ಪಿಜ್ಜಾ ಎಗರಿಸಿಕೊಂಡು ಪರಾರಿಯಾಗ್ತಿದ್ದಾರೆ.

ಈ ಬಗ್ಗೆ ಲಿಖಿತ ದೂರು ಕೊಟ್ರೂ ಪೊಲೀಸರು ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸ್ತಾ ಇಲ್ಲ, ಕ್ಲುಲ್ಲಕ ಪ್ರಕರಣ ಅಂತಾ ಸುಮ್ಮನಾಗ್ತಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಇಲ್ಲವೇ ಹೆಲ್ಮೆಟ್ ಧರಿಸಿ ಕಿಡಿಗೇಡಿಗಳು ಪಿಜ್ಜಾಗೆ ಕನ್ನ ಹಾಕ್ತಿದ್ದಾರೆ, ಬಹುತೇಕ ಪಿಜ್ಜಾ ಕಳವು ಪ್ರಕರಣಗಳೆಲ್ಲ ಕಾಲೇಜು ಕ್ಯಾಂಪಸ್ ಬಳಿ ನಡೆದಿವೆ. ಆರಂಭದಲ್ಲಿ ಡೆಲಿವರಿ ಬಾಯ್ ಗಳೇ ಸುಳ್ಳು ಹೇಳ್ತಿದ್ದಾರೆ ಅನ್ನೋ ಅನುಮಾನ ರೆಸ್ಟೋರೆಂಟ್ ಮಾಲೀಕರಿಗಿತ್ತು. ಆದ್ರೆ ದಿನೇ ದಿನೇ ಪಿಜ್ಜಾ ಕಳ್ಳರ ಹಾವಳಿ ಹೆಚ್ಚಾಗಿರೋದ್ರಿಂದ ಸತ್ಯ ಅವರಿಗೂ ಅರಿವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...