alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ಹಿಂದಿನ ‘ಅಸಲಿ’ ಕಾರಣ ಬಿಚ್ಚಿಟ್ಟ ಹಣಕಾಸು ಸಚಿವ

ನೋಟು ಅಮಾನ್ಯೀಕರಣ ಸಮರ್ಥಿಸಿಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಅದು ಹೆಚ್ಚು ನೈತಿಕತೆ ಉದ್ದೇಶಕ್ಕೆ ಮಾಡಿದ ತೀರ್ಮಾನವೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಹೇಳಿದ್ದಾರೆ. ಭೋಪಾಲ್ ನಲ್ಲಿ ಮಾತನಾಡಿರುವ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ರ್ಯಾಲಿಗಳಲ್ಲಿ ನೋಟು ನಿಷೇಧದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ಬೆನ್ನಲ್ಲಿ ಅರುಣ್ ಜೇಟ್ಲಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ನೋಟು ನಿಷೇಧ ಒಂದು ನೈತಿಕವಾದ ಕ್ರಮವಾಗಿತ್ತು. ರಾಜಕೀಯ ನಿರ್ಧಾರವಲ್ಲ ಎಂದು ಜೇಟ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಧ್ಯ ಪ್ರದೇಶ ಚುನಾವಣೆ ಪ್ರಣಾಳಿಕೆ ಬಿಡುಗಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನೋಟು ಆಮಾನ್ಯೀಕರಣದಿಂದ ತೆರಿಗೆ ರಿಟರ್ನ್ ಫೈಲ್ ಸಂಖ್ಯೆ ಹೆಚ್ಚಾಗಿದೆ, ಕೇಂದ್ರ ಹಾಗೂ ರಾಜ್ಯದ ಆದಾಯವೂ ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆ ರ್ಯಾಲಿಗಳಲ್ಲಿ ಮಾತನಾಡುತ್ತಿರುವ ರಾಹುಲ್ ಗಾಂಧಿ, ನೋಟ್ ಬ್ಯಾನ್ ಒಂದು ದೊಡ್ಡ ಹಗರಣ ಎಂದು ಟೀಕಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಣಕಾಸು ಸಚಿವರಿಂದ ಮತ್ತೊಮ್ಮೆ ಸ್ಪಷ್ಟನೆ ಹೊರ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...