alex Certify
ಕನ್ನಡ ದುನಿಯಾ       Mobile App
       

Kannada Duniya

ಸುಟ್ಟು ಭಸ್ಮವಾಯ್ತು 500-1000 ರೂ. ನೋಟು

note-fire

ಕಸದ ಬುಟ್ಟಿಯಲ್ಲಿ ನೋಟಿನ ಕಂತೆ, ನದಿಯಲ್ಲಿ ತೇಲ್ತಿತ್ತು ಹಣ ಎಂಬೆಲ್ಲ ಸುದ್ದಿ ಬರ್ತಾನೆ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8 ರಂದು 500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುವ ಘೋಷಣೆ ಮಾಡಿದ್ದಾರೆ.

ಮೋದಿ ನಿಷೇಧದ ಸುದ್ದಿ ಹೇಳ್ತಿದ್ದಂತೆ ಕಪ್ಪುಹಣ ಸಂಗ್ರಹಿಸಿಟ್ಟವರು ಕಂಗಾಲಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಕಪ್ಪುಹಣವನ್ನು ಹೇಗೆಲ್ಲ ಖರ್ಚು ಮಾಡಬೇಕೆಂಬ ಚಿಂತೆಗೆ ಪರಿಹಾರ ಹುಡುಕುತ್ತಿದ್ದಾರೆ.

ಕೆಲವರು ನೋಟುಗಳನ್ನು ನೀರಿಗೆ ಹಾಕಿದ್ರೆ ಮತ್ತೆ ಕೆಲವರು ಕಸದ ಬುಟ್ಟಿಗೆಸೆದಿದ್ದಾರೆ. ಇನ್ನೂ ಕೆಲವರು ನೋಟಿಗೆ ಬೆಂಕಿ ಹಚ್ಚಿದ್ದಾರೆ. ನೋಟುಗಳನ್ನು ಬೆಂಕಿ ಹಚ್ಚಿದ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹಾಸಿಗೆ ಮೇಲೆ ನೋಟುಗಳನ್ನು ಹರಡಿಕೊಂಡು ಒಂದೊಂದೆ ನೋಟುಗಳನ್ನು ಸುಡುತ್ತಿದ್ದಾನೆ.

ಈ ವಿಡಿಯೋ ಥಾಣೆ ಜಿಲ್ಲೆಯದ್ದು ಎನ್ನಲಾಗ್ತಾ ಇದೆ. ಆತನೊಬ್ಬ ಕೃಷಿಕ ಎಂದು ಮೂಲಗಳು ಹೇಳಿವೆ.

https://youtu.be/66EXETqOXhs

 

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...