alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ದುಸ್ತರವಾಗಲಿದೆ ತಿಂಗಳ ಕೊನೆ

New Delhi: People queue up at out side of banks ATM to get money in New Delhi on Sunday. PTI photo by Vijay Verma(PTI11_13_2016_000071A)

ನೋಟು ನಿಷೇಧದ ಸಮಸ್ಯೆ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ದಿನ 18 ಕಳೆದ್ರೂ ಹಣ ಮಾತ್ರ ಕೈ ಸೇರ್ತಾ ಇಲ್ಲ. ಎಟಿಎಂ ಹಾಗೂ ಬ್ಯಾಂಕ್ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಈ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಮತ್ತಷ್ಟು ಉಲ್ಬಣಿಸಲಿದೆ.

ನವೆಂಬರ್ ಕೊನೆಯ ವಾರ ಇದು. ಎಲ್ಲರಿಗೂ ಸಂಬಳವಾಗುವ ಸಮಯ. ಡಿಸೆಂಬರ್ 1ರ ಆಸುಪಾಸು ಹಣಕ್ಕಾಗಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ದೇಶದಾದ್ಯಂತ ಬೇಡಿಕೆ ಹೆಚ್ಚಾಗುವುದರಿಂದ ಹಣದ ಕೊರತೆ ಉಲ್ಬಣಿಸಲಿದೆ. ಸರ್ಕಾರಿ ಕಚೇರಿಗಳಲ್ಲಿ ಆನ್ಲೈನ್ ಪೇಮೆಂಟ್ ಗೆ ವ್ಯವಸ್ಥೆ ಮಾಡಲಾಗ್ತಾ ಇದೆ. ಬಹುತೇಕ ಖಾಸಗಿ ಕಂಪನಿಗಳು ಮೊದಲಿನಿಂದ್ಲೂ ಆನ್ಲೈನ್ ಪೇಮೆಂಟ್ ಮಾಡ್ತಾ ಇವೆ. ಆದ್ರೆ ಕೂಲಿ ಕಾರ್ಮಿಕರು, ಮನೆಕೆಲಸದಾಳುಗಳು ಸೇರಿದಂತೆ ನಗದು ರೂಪದಲ್ಲಿ ಸಂಬಳ ಪಡೆಯುತ್ತಿರುವವರು ಸಂಕಷ್ಟ ಎದುರಿಸಬೇಕಾಗಿದೆ.

ಮಾಲೀಕರ ಬಳಿ ನಗದು ಹಣವಿಲ್ಲ. ಹಾಗಾಗಿ ಸಂಬಳ ಕೊಡುವುದು ಕಷ್ಟವಾಗ್ತಾ ಇದೆ. ಹಾಗಾಗಿ ಕೆಲವು ಕಡೆ ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಅಕೌಂಟ್ ಮಾಡಿಸಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...