alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟು ಪಡೆಯಲು ಪರದಾಡ್ತಿದ್ದಾರೆ ಜನ

bank-1

ಸತತ 3ನೇ ದಿನವೂ ಬ್ಯಾಂಕ್ ಗಳ ಮುಂದೆ ಜನವೋ ಜನ. ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಗ್ರಾಹಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾಯ್ತಿದ್ದಾರೆ.

ಕೆಲವು ಕಡೆ ಚಿಕ್ಕ ಪುಟ್ಟ ಗಲಾಟೆಗಳು ಕೂಡ ನಡೆದಿವೆ, ದೆಹಲಿಯ ಬ್ಯಾಂಕ್ ಒಂದರಲ್ಲಿ ಭದ್ರತಾ ಸಿಬ್ಬಂದಿ ಒಳಕ್ಕೆ ಬಿಡಲಿಲ್ಲ ಅನ್ನೋ ಕಾರಣಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಜಪಾನ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರ ಬಗ್ಗೆ ಕೂಡ ಕೆಲವರು ಕಿಡಿಕಾರಿದ್ದಾರೆ. 6 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಸುಸ್ತಾಗಿದ್ದ ಕಾಲೇಜು ಹುಡುಗನೊಬ್ಬ ಮೋದಿ ನಡೆಯನ್ನು ಟೀಕಿಸಿದ್ದಾನೆ.

ಮೋದಿ ಜಪಾನ್ ನಲ್ಲಿ ಬುಲೆಟ್ ಟ್ರೈನ್ ಏರಿದ್ದಾರೆ, ಇಲ್ಲಿ ವಯೋವೃದ್ಧರು ಗಂಟೆಗಟ್ಟಲೆ ಬ್ಯಾಂಕ್ ಬಾಗಿಲಲ್ಲಿ ಕಾಯ್ತಿದ್ದಾರೆ ಅಂತಾ ಹೇಳಿದ್ದಾನೆ. ಇನ್ನು ಎಟಿಎಂಗಳಲ್ಲಿ ಕೂಡ ಹಣ ಸಿಗುತ್ತಿಲ್ಲ, ನಿನ್ನೆ ಹಣವಿಲ್ಲ ಅನ್ನೋ ಕಾರಣಕ್ಕೆ ಲಕ್ಷಾಂತರ ಎಟಿಎಂ ಗಳನ್ನು ಬಂದ್ ಮಾಡಲಾಗಿದೆ. ಬ್ಯಾಂಕ್ ಗಳಲ್ಲಿ ಕೂಡ ಹೊಸ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇರುವುದರಿಂದ ಬದಲಾವಣೆ ಪ್ರಕ್ರಿಯೆ ನಿಧಾನವಾಗ್ತಿದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಸಿದ್ಧತೆ ಮಾಡಿಕೊಳ್ಳಲು ಹಣವಿಲ್ಲದಂತಾಗಿದೆ ಅನ್ನೋದು ಸಾರ್ವಜನಿಕರ ಅಳಲು. ಇನ್ನು ಕೆಲವು ಕಡೆಗಳಲ್ಲಿ ನಿತ್ಯ ಖರ್ಚಿಗೂ ಕಾಸಿಲ್ಲ ಎನ್ನುತ್ತಿದ್ದಾರೆ ಜನ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...