alex Certify
ಕನ್ನಡ ದುನಿಯಾ       Mobile App
       

Kannada Duniya

ಒಡತಿಯನ್ನು ರಕ್ಷಿಸಲು ಪ್ರಾಣವನ್ನೇ ಅರ್ಪಿಸಿದ ನಾಯಿ

dog

ಮುಂಬೈನಲ್ಲಿ ನಾಯಿಯೊಂದು ಮಾಲಕಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದೆ. 23 ವರ್ಷದ ಯುವಕ ವೆಂಕಟೇಶ್ ದೇವೇಂದ್ರ ಎಂಬಾತ ನಾಯಿ ಕೊಂದ ಆರೋಪಿ. ರಾತ್ರಿ 11.30ರ ವೇಳೆಗೆ ವೆಂಕಟೇಶ ಮತ್ತವನ ಪ್ರೇಯಸಿ ಜೋರಾಗಿ ಜಗಳ ಮಾಡಿಕೊಂಡಿದ್ದಾರೆ.

ಯುವತಿ ವೆಂಕಟೇಶನಿಂದ ತಪ್ಪಿಸಿಕೊಳ್ಳಲು ಅಲ್ಲೇ ಹತ್ತಿರದಲ್ಲಿದ್ದ ಮನೆಯೊಳಕ್ಕೆ ಓಡಿ ಬಂದಿದ್ದಾಳೆ. ವೆಂಕಟೇಶ ಕೂಡ ಚಾಕು ಹಿಡಿದುಕೊಂಡು ಅವಳ ಹಿಂದೆಯೇ ಬಂದಿದ್ದ. ಅದು ಸುಮತಿ ಎಂಬುವವರ ಮನೆಯಾಗಿತ್ತು. ಸುಮತಿ ಲಕ್ಕಿ ಎಂಬ ಮುದ್ದಾದ ನಾಯಿಯೊಂದನ್ನು ಸಾಕಿದ್ದರು.

ಸುಮತಿ, ಆ ಯುವತಿಯ ರಕ್ಷಣೆಗಾಗಿ ಮುಂದೆ ಬಂದ್ರು. ಆಗ ಅವರೊಂದಿಗೂ ವೆಂಕಟೇಶ ಜಗಳ ಶುರುಮಾಡಿದ್ದಾನೆ. ಕೊನೆಗೆ ಚಾಕು ತೆಗೆದು ಸುಮತಿಗೆ ತಿವಿಯಲು ಮುಂದಾಗಿದ್ದ. ಈ ವೇಳೆ ನಾಯಿ ಲಕ್ಕಿ, ಸುಮತಿಯ ರಕ್ಷಣೆಗೆ ಧಾವಿಸಿದೆ.

ಆರೋಪಿ ವೆಂಕಟೇಶನಿಗೆ ಪರಚಿ, ಆತನ ಬಟ್ಟೆಯನ್ನೆಲ್ಲ ಹರಿದು ಹಾಕಿದೆ. ವೆಂಕಟೇಶ ಸುಮತಿಯತ್ತ ಬೀಸಿದ ಚಾಕು ನಾಯಿಯ ಹೊಟ್ಟೆಗೆ ಹೊಕ್ಕಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಆರೋಪಿ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...