alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತದೇಹದ ಗುರುತು ಪತ್ತೆ ಹಚ್ಚಲು ನೆರವಾಗುತ್ತಾ ‘ಆಧಾರ್’…?

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಬಳಸಿಕೊಂಡು ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವೇ? ಇಲ್ಲ ಎನ್ನುತ್ತಿದೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ).

ಅಪರಿಚಿತ ಮೃತದೇಹಗಳ ಗುರುತು ಪತ್ತೆಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಕೋರ್ಟ್ ಮುಂದೆ ಯುಐಡಿಎಐ ಈ ವಿಚಾರ ತಿಳಿಸಿದೆ.

ದೇಶದಲ್ಲಿ 120 ಕೋಟಿಗೂ ಹೆಚ್ಚು ಮಂದಿಯ ದತ್ತಾಂಶಗಳೊಂದಿಗೆ ಮೃತ ವ್ಯಕ್ತಿಯ ಬೆರಳಚ್ಚನ್ನು ತಾಳೆ ಹಾಕಿ ನೋಡುವುದು ಅಸಾಧ್ಯ. ಬೆರಳಚ್ಚು , ಕಣ್ಣಿನ ಪೊರೆಯ ಸ್ಕ್ಯಾನ್ ಸೇರಿದಂತೆ ಆಧಾರ್ ಗಾಗಿ ಪಡೆಯಲಾದ ವ್ಯಕ್ತಿಯ ಬಯೋಮೆಟ್ರಿಕ್ಸ್ ಅನ್ನು ಪರಸ್ಪರ 1:1 ರಂತೆ ತಾಳೆ ಹಾಕಿ ನೋಡಲಾಗುತ್ತದೆ. ಇದಕ್ಕೆ ಆಧಾರ್ ಸಂಖ್ಯೆ ಬೇಕಿರುತ್ತದೆ.

ಈ ರೀತಿ ಬಯೋಮೆಟ್ರಿಕ್ಸ್ ಮೂಲಕ ಗುರುತು ಪತ್ತೆ ಹಚ್ಚಬೇಕಿದ್ದರೆ ಎಲ್ಲಾ ಬೆರಳುಗಳ ಅಚ್ಚು ಹಾಗೂ ಕಣ್ಣಿನ ಪೊರೆಯ ಸ್ಕ್ಯಾನ್ ಬೇಕಾಗುತ್ತದೆ. ಒಂದು ವೇಳೆ ಒಂದೇ ಬೆರಳಿನ ಗುರುತು ತಾಳೆ ಹಾಕಲು ಹೋದರೆ ಗೊಂದಲ ಆಗುವ ಸಾಧ್ಯತೆ ಇರುತ್ತದೆ ಎಂದು ಯುಐಡಿಎಐ ಪರ ವಕೀಲರು ಹೇಳಿದ್ದಾರೆ.

ಅಪರಿಚಿತ ಮೃತದೇಹದ ಗುರುತು ಪತ್ತೆಗೆ ಆಧಾರ್ ನ ಬಯೋಮೆಟ್ರಿಕ್ಸ್ ಅನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಹಾಗೂ ಯುಐಡಿಎಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಅಮಿತ್ ಸಹನಿ ಅವರು ದೆಹಲಿ ಕೋರ್ಟ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಕೋರ್ಟ್ ಗೆ ಹಾಜರಾಗಿದ್ದ ಯುಐಡಿಎಐ ಪರ ವಕೀಲರು ಕೋರ್ಟ್ ಮುಂದೆ ಈ ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...