alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಅಧಿಕಾರ ದುರುಪಯೋಗದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಬಳಸುವ ಆಂಬುಲೆನ್ಸ್ ಅನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.

ಕಣ್ಣೂರಿನಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಆಂಬುಲೆನ್ಸ್ ಬಳಸಿಕೊಳ್ಳಲಾಗಿದೆ. ಈ ಮೂಲಕ ಆಡಳಿತಾರೂಢ ಸಿ.ಪಿ.ಐ.(ಎಂ) ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ.

ಆಂಬುಲೆನ್ಸ್ ಮೇಲೆ ಪಕ್ಷದ ಚಿಹ್ನೆ, ನಾಯಕರ ಭಾವಚಿತ್ರ ಒಳಗೊಂಡಂತೆ ಸ್ಟಿಕರ್ ಹಚ್ಚಲಾಗಿದ್ದು, ಸಿ.ಪಿ.ಐ.(ಎಂ) ಚಿಹ್ನೆಗಳಿಂದ ಅಲಂಕೃತಗೊಂಡ ಆಂಬುಲೆನ್ಸ್ ವಾಹನವನ್ನು ಪಕ್ಷದ ರ್ಯಾಲಿಗೆ ಬಳಸಿಕೊಳ್ಳಲಾಗಿದೆ.

ತುರ್ತು ವೈದ್ಯಕೀಯ ಅಗತ್ಯತೆಗಳನ್ನು ಹೊರತುಪಡಿಸಿ ಯಾವುದೇ ಸಂದರ್ಭಗಳಲ್ಲಿ ಆಂಬುಲೆನ್ಸ್ ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಆದರೆ, ಸಿ.ಪಿ.ಐ.(ಎಂ) ಕಾರ್ಯಕರ್ತರು ಆಂಬುಲೆನ್ಸ್ ನಲ್ಲೇ ಪ್ರಚಾರ ನಡೆಸಿದ್ದಾರೆ.

ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿ.ಜೆ.ಪಿ. ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದು ಅಧಿಕಾರ ದುರ್ಬಳಕೆಯ ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...