alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್….ನವೆಂಬರ್ ನಲ್ಲಿ ನಡೆಯುತ್ತಾ ಕರ್ನಾಟಕ ವಿಧಾನಸಭಾ ಚುನಾವಣೆ…?

ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎರಡೂ ಒಟ್ಟೊಟ್ಟಿಗೇ ನಡೆಯುವ ಸಾಧ್ಯತೆ ಇದೆ. ಹಾಗೇನಾದ್ರೂ ಆದಲ್ಲಿ ಭಾರತದ ಚುನಾವಣಾ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಯಾಗಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ 6 ತಿಂಗಳು ವಿಳಂಬವಾಗಲಿದೆ ಅಂತಾ ಮೂಲಗಳು ತಿಳಿಸಿವೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲೂ ಈ ವರ್ಷಾಂತ್ಯಕ್ಕೆ ಅಸೆಂಬ್ಲಿ ಇಲೆಕ್ಷನ್ ನಡೆಯಲಿದೆ. ಅದೇ ಸಮಯದಲ್ಲೇ ಕರ್ನಾಟಕದಲ್ಲೂ ಚುನಾವಣೆ ನಡೆಸೋದು ಕೇಂದ್ರದ ಪ್ಲಾನ್.

ಹಾಗಾಗಿ 6 ತಿಂಗಳು ವಿಳಂಬವಾಗಿ ನವೆಂಬರ್ ನಲ್ಲಿ ಚುನಾವಣೆ ನಡೆಸಲು ಕರ್ನಾಟಕ ಸರ್ಕಾರದ ಸಮ್ಮತಿ ಕೇಳಲಾಗಿದೆಯಂತೆ. ಪ್ರಧಾನಿ ಮೋದಿ ಅವರ ‘ವನ್ ನೇಶನ್, ವನ್ ಎಲೆಕ್ಷನ್’ ಯೋಜನೆಯಂತೆ ಮಾನವ ಸಂಪನ್ಮೂಲ ಮತ್ತು ಸರ್ಕಾರದ ಹಣ ಪೋಲಾಗದಂತೆ ಒಟ್ಟೊಟ್ಟಿಗೆ ಚುನಾವಣೆ ನಡೆಸಲು ಯೋಜಿಸಲಾಗಿದೆ.

ಅವಧಿ ಮುಗಿದ ಬಳಿಕವೂ 6 ತಿಂಗಳುಗಳ ಕಾಲ ಸಿಎಂ ಸಿದ್ದರಾಮಯ್ಯ, ಸರ್ಕಾರದ ಕೇರ್ ಟೇಕರ್ ಆಗಿ ಮುಂದುವರಿಯಲಿದ್ದಾರೆ. ಆದ್ರೆ ಇಂಥದ್ದೊಂದು ಪತ್ರ ಕೇಂದ್ರದಿಂದ ಬಂದಿದೆ ಅನ್ನೋದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ಚುನಾವಣೆ ಮುಂದೂಡಿಕೆಯ ಸಾಧ್ಯತೆಗಳಿಲ್ಲ ಅಂತಾ ತಜ್ಞರು ಕೂಡ ಹೇಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...