alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಸೆರೆಯಾಗಿತ್ತು ಅವರ ಅಂತಿಮ ಕ್ಷಣ

ರಾಜಸ್ಥಾನದಲ್ಲಿ ನಡೆದ ಘಟನೆಯೊಂದರ ವಿಡಿಯೋ ಮನ ಕಲಕುವಂತಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ತಮಗರಿವಿಲ್ಲದಂತೆ ತಮ್ಮ ಅಂತಿಮ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಬುಧವಾರದಂದು ರಾಜಸ್ಥಾನದ ರಾಜ್ಸಮಂದ್ ನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಚೇತನ್ ಕಾತೀಕ್, 22 ವರ್ಷದ ಸುದರ್ಶನ್ ಹಾಗೂ 27 ವರ್ಷದ ರಾಧೇಶ್ಯಾಮ್ ಕಾತೀಕ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಮಾರ್ಗಮಧ್ಯದಲ್ಲಿ ಹೊಳೆಯನ್ನು ಕಂಡಿದ್ದಾರೆ.

ಅವರುಗಳಿಗೆ ಈಜಾಡುವ ಬಯಕೆಯಾಗಿದ್ದು, ಮೊಬೈಲನ್ನು ದಂಡೆಯ ಮೇಲಿಟ್ಟು ಮೂವರೂ ಹೊಳೆಗೆ ಇಳಿದಿದ್ದಾರೆ. ಪರಸ್ಪರ ಮೈಮೇಲೆ ನೀರು ಎರಚಿಕೊಂಡು ಆಟವಾಡುತ್ತಿದ್ದ ವೇಳೆ ಒಬ್ಬಾತ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ಹಿಡಿಯಲು ಮತ್ತಿಬ್ಬರು ಹೋಗಿದ್ದು, ಮೂವರು ಕ್ಷಣಾರ್ಧದಲ್ಲೇ ನೀರಿನಲ್ಲಿ ಮುಳುಗಿದ್ದಾರೆ. ಎಲ್ಲಾ ದೃಶ್ಯಗಳು ಅವರ ಮೊಬೈಲ್ ನಲ್ಲಿ  ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...