alex Certify
ಕನ್ನಡ ದುನಿಯಾ       Mobile App
       

Kannada Duniya

GST ಇಳಿಕೆಯ ಲಾಭ ಸಿಗುತ್ತಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

ಜಿಎಸ್ಟಿ ಇಳಿಕೆಯಾಗಿದ್ದರೂ ಸರಕು ಮತ್ತು ಸೇವೆಗಳ ಬೆಲೆ ಕಡಿಮೆ ಮಾಡದ ವ್ಯಾಪಾರಿ ವಿರುದ್ಧ, ಮಳಿಗೆ ಮಾಲೀಕರ ವಿರುದ್ಧ ಗ್ರಾಹಕರು ದೂರು ನೀಡಬಹುದು. ಜಿಎಸ್ಟಿ ಇಳಿಕೆ ಲಾಭ ನೇರವಾಗಿ ಗ್ರಾಹಕರಿಗೆ ಸಿಗಬೇಕೆಂದು ಹಣಕಾಸು ಸಚಿವಾಲಯವೇ ಸೂಚನೆ ನೀಡಿರುವುದರಿಂದ, ವಂಚಕ ವ್ಯಾಪಾರಿಗಳ ವಿರುದ್ಧ NAAಗೆ ದೂರು ಕೊಡಬಹುದು.

ಇದಕ್ಕಾಗಿ ನೀವು ಅರ್ಜಿಯನ್ನು ಭರ್ತಿ ಮಾಡಿ ಸ್ಟ್ಯಾಂಡಿಂಗ್ ಕಮಿಟಿಗೆ ಸಲ್ಲಿಸಿ. ಗುರುತಿನ ಚೀಟಿ, ಇನ್ ವಾಯ್ಸ್, ಬೆಲೆಗಳ ಪಟ್ಟಿ, ಡಿಟೇಲ್ಡ್ ವರ್ಕಿಂಗ್ ಶೀಟ್ ಇವನ್ನೆಲ್ಲ ಅರ್ಜಿ ಜೊತೆಗೆ ದಾಖಲೆಯಾಗಿ ನೀಡಬೇಕು. ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ & ಕಸ್ಟಮ್ಸ್ ವೆಬ್ ಸೈಟ್ ನಲ್ಲಿ ಅರ್ಜಿ ಲಭ್ಯವಿದೆ.

http://www.cbec.gov.in/resources//htdocs-cbec/gst/format_%20for_filing_anti-profiteering_application_new.pdf ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನವೆಂಬರ್ 10 ರಂದು ಸುಮಾರು 178 ವಸ್ತುಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಮಾಡಲಾಗಿದೆ. ಹಾಗಾಗಿ ವ್ಯಾಪಾರಿಗಳು ಮತ್ತು ಮಳಿಗೆ ಮಾಲೀಕರು ಕೂಡ ಉತ್ಪನ್ನಗಳ ಮೇಲಿನ ಎಂ ಆರ್ ಪಿ ಕಡಿಮೆ ಮಾಡಬೇಕೆಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ. ಆದ್ರೂ ಕೆಲವರು ಹಳೆ ಬೆಲೆಗೇ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...