alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಾಳಿಗೆ ಹೊಲಿಗೆ ಹಾಕಿದ ಆಸ್ಪತ್ರೆ ಕೆಲಸಗಾರ…!

ಚೆನ್ನೈನಿಂದ ಸರಿಸುಮಾರು 430 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಹೊಲಿಗೆ ಹಾಕಿದ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುಖದ ಗಾಯಕ್ಕೆ ಹೊಲಿಗೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಂಚಲನ ಸೃಷ್ಟಿಸಿದೆ. ಹೊಲಿಗೆ ಹಾಕುವಾಗ ಆತ ಹ್ಯಾಂಡ್ ಗ್ಲೌಸ್ ಕೂಡ ಹಾಕಿರಲಿಲ್ಲ. ಹೊಲಿಗೆ ಹಾಕುವ 40 ಸೆಕೆಂಡಿನ ವಿಡಿಯೋ ಇದಾಗಿದ್ದು, ಗಾಯಾಳು ಮಹಿಳೆಯ ಚೀರಾಟದ ನಡುವೆ ಆ ವ್ಯಕ್ತಿ ಹೊಲಿಗೆ ಹಾಕುತ್ತಿರುವುದು ಕಂಡುಬರುತ್ತದೆ.

ತಮಿಳುನಾಡು ಆರೋಗ್ಯ ಇಲಾಖೆ ಈಗ ಪ್ರಕರಣದ ತನಿಖೆಗೆ ಆದೇಶಿಸಿದೆ. ಕೊಡೈಕೆನಾಲ್ ನಿಂದ ವಾಪಾಸು ತೆರಳುವಾಗ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಈಕೆ ಎಂದು ಗುರುತಿಸಲಾಗಿದೆ. ಇಂಥದ್ದೇ ಘಟನೆ ಇತ್ತೀಚೆಗೆ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲೂ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...