alex Certify
ಕನ್ನಡ ದುನಿಯಾ       Mobile App
       

Kannada Duniya

33 ಶಾಲೆ, 33 ಕಾಲೇಜು…ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳೂ ಫೇಲ್..!

bccl_embed_exam_1496315420

ಜಾರ್ಖಂಡ್ ನ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಹಲವು ಶಾಲಾ-ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 66 ಶಾಲೆಗಳು ಮತ್ತು ಇಂಟರ್ ಮೀಡಿಯೇಟ್ ಕಾಲೇಜುಗಳ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಉತ್ತೀರ್ಣವಾಗಿಲ್ಲ. ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಫೇಲ್ ಆಗಿದ್ದಾರೆ.

10ನೇ ತರಗತಿಯಲ್ಲಿ ಶೇ.57.9ರಷ್ಟು ವಿದ್ಯಾರ್ಥಿಗಳು, 12ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಶೇ.52.36ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.60.09ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಅಂತಾ ಜಾರ್ಖಂಡ್ ಆಕಾಡೆಮಿಕ್ ಕೌನ್ಸಿಲ್ ಹೇಳಿಕೊಂಡಿದೆ.

ಆದ್ರೆ ಶಿಕ್ಷಣ ಇಲಾಖೆಯಿಂದ ದೊರೆತ ಮಾಹಿತಿ ಪ್ರಕಾರ 33 ಶಾಲೆ ಮತ್ತು 33 ಇಂಟರ್ ಮೀಡಿಯೆಟ್ ಕಾಲೇಜುಗಳ ಒಬ್ಬ ವಿದ್ಯಾರ್ಥಿ ಕೂಡ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ. 12ನೇ ತರಗತಿಯ 148 ಹಾಗೂ 10ನೇ ತರಗತಿಯ 240 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೂನ್ಯ ಫಲಿತಾಂಶ ಬರಲು ತಾಂತ್ರಿಕ ಕಾರಣಗಳಿರಬಹುದು ಅನ್ನೋ ಅನುಮಾನವೂ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...