alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ ಪ್ರಿಯರಿಗೊಂದು ಸಂತಸದ ಸುದ್ದಿ

nokia

ನವದೆಹಲಿ: ವಿಶ್ವದ ಮೊಬೈಲ್ ಲೋಕದಲ್ಲಿಯೇ ಮೊದಲ ಸ್ಥಾನದಲ್ಲಿದ್ದ ನೋಕಿಯಾ, ಮೈಕ್ರೋಸಾಫ್ಟ್ ತೆಕ್ಕೆಗೆ ಸೇರಿದ ನಂತರ ಮೈಕ್ರೋಸಾಫ್ಟ್ ಬ್ರಾಂಡ್ ನಲ್ಲಿಯೇ ಮಾರುಕಟ್ಟೆಗೆ ಬಂದಿದ್ದರೂ, ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ ಎನ್ನಲಾಗಿದೆ.

ಮೈಕ್ರೋಸಾಫ್ಟ್ ಇನ್ನುಮುಂದೆ ಹೊಸ ಅವತಾರದಲ್ಲಿ ನೋಕಿಯಾ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಒಂದೊಮ್ಮೆ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದ ನೋಕಿಯಾ, ಪೈಪೋಟಿಯಿಂದಾಗಿ ಹಿಂದೆ ಬಿದ್ದಿದೆ. ಈಗಂತೂ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ವಿಜೃಂಭಿಸುತ್ತಿವೆ. ಹಲವಾರು ಬಗೆಯ ಸ್ಮಾರ್ಟ್ ಫೋನ್ ಗಳನ್ನು ವಿವಿಧ ಕಂಪನಿಗಳು ಪರಿಚಯಿಸಿದ್ದು, ಗ್ರಾಹಕರಿಗೆ ಅನುಕೂಲವಾಗುವಂತಹ ಫೀಚರ್ಸ್, ದರ ಕೂಡ ಫಿಕ್ಸ್ ಮಾಡಿ ಯಶಸ್ವಿಯಾಗುತ್ತಿವೆ.

ಇದೀಗ ಅಂಡ್ರಾಯಿಡ್ ಮಾಡೆಲ್ ನೋಕಿಯಾ ಪಿ1 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ವಿಂಡೋಸ್ ಮಾದರಿ ಯಶಸ್ವಿಯಾಗದ ಹಿನ್ನಲೆಯಲ್ಲಿ, ನೋಕಿಯಾ ಅಂಡ್ರಾಯಿಡ್ ಫೋನ್ ಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...