alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾದ ನೋಕಿಯಾ 5.1 ಪ್ಲಸ್ ಮೊಬೈಲ್ ಬೆಲೆ ಎಷ್ಟು ಗೊತ್ತಾ?

ಹೆಚ್ ಎಂ ಡಿ ಭಾರತದಲ್ಲಿ ಇಂದು ನೋಕಿಯಾ 5.1 ಪ್ಲಸ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಒನ್ ಸ್ಮಾರ್ಟ್ಫೋನ್  6.1 ಪ್ಲಸ್ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಆಗ್ಲೇ ನೋಕಿಯಾ 5.1 ಪ್ಲಸ್  ಬಗ್ಗೆ ಮಾಹಿತಿ ನೀಡಲಾಗಿತ್ತು. ಆದ್ರೆ ಆಗ ನೋಕಿಯಾ 5.1 ಪ್ಲಸ್ ಮೊಬೈಲ್ ಬೆಲೆ ಎಷ್ಟು ಎಂಬುದು ಬಹಿರಂಗವಾಗಿರಲಿಲ್ಲ.

ಸೋಮವಾರ ಹೆಚ್ ಎಂಡಿ ಫೋನ್ ಬಗ್ಗೆ ಮಾಹಿತಿ ನೀಡಿದೆ. ನೋಕಿಯಾ 5.1 ಪ್ಲಸ್ ಅಕ್ಟೋಬರ್ 1 ರಿಂದ ಮಾರಾಟಕ್ಕೆ ಲಭ್ಯವಾಗಲಿದೆಯಂತೆ. ಇದ್ರ ಬೆಲೆ 10,999 ರೂಪಾಯಿ ಎಂದು ಕಂಪನಿ ಹೇಳಿದೆ. ನೋಕಿಯಾ 5.1 ಪ್ಲಸ್ ಮೊಬೈಲ್ ಮೇಲೆ ಗ್ರಾಹಕರಿಗೆ 1800 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಏರ್ಟೆಲ್ ಬಳಕೆದಾರರಿಗೆ 240 ಜಿಬಿ ಡೇಟಾ ಸಿಗಲಿದೆ. ಬಳಕೆದಾರರು ಇದಕ್ಕಾಗಿ 199, 249 ಅಥವಾ 448 ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು.

ನೋಕಿಯಾ 5.1 ಪ್ಲಸ್ 5.8 ಇಂಚಿನ ಡಿಸ್ಪ್ಲೇ ಜೊತೆ ಬರ್ತಿದೆ. ಫೋನ್ ನಲ್ಲಿ ಡ್ಯುಯಲ್ ರಿಯರ್ ಕ್ಯಾಮರಾವಿದೆ. 13 ಮೆಗಾಪಿಕ್ಸಲ್ ಹಾಗೂ 5 ಮೆಗಾಪಿಕ್ಸಲ್ ಕ್ಯಾಮರಾ ಅಳವಡಿಸಲಾಗಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಕ್ಯಾಮರಾ ಲಭ್ಯವಿದೆ. ಫೋನ್ ಗೆ 3060 mAh ಬ್ಯಾಟರಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...