alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತ್ಯಕ್ರಿಯೆ ಮುಗಿದ ಮೇಲೆ ಸತ್ತಳೆಂದು ಭಾವಿಸಿದ್ದ ಮಹಿಳೆ ಪ್ರತ್ಯಕ್ಷವಾದ್ಲು

ನೋಯ್ಡಾದಲ್ಲಿ ಸತ್ತ ಮಗಳ ಅಂತ್ಯಕ್ರಿಯೆ ಮುಗಿಸಿದ ಮೇಲೆ, ಮಗಳು ಮನೆಗೆ ಹಿಂದಿರುಗಿದ ಘಟನೆ ನಡೆದಿದೆ. ಹೌದು, ರಾಜ ಮತ್ತು ಸರ್ವೇಶ್ ಸಕ್ಸೆನಾ ಎಂಬ ದಂಪತಿ ತಮ್ಮ ಮಗಳು 25 ವರ್ಷದ ನೀತು ಕೊಲೆಯಾಗಿದ್ದಾಳೆ. ಆಕೆಯ ಪತಿ ರಾಮ್ ಲಖನ್ ಕೊಲೆಗೈದಿದ್ದಾನೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು.

ಅಂತೆಯೇ ಏಪ್ರಿಲ್ 25 ರಂದು ಎಫ್ ಎನ್ ಜಿ ಎಕ್ಸ್ ಪ್ರೆಸ್ ವೇ ರಸ್ತೆಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ ಒಂದು ದೇಹ ಸಿಕ್ಕಿತ್ತು. ಪೊಲೀಸರು ನೀತು ಪೋಷಕರಿಗೆ ತಮ್ಮ ಮಗಳ ದೇಹ ಗುರುತಿಸುವಂತೆ ತಿಳಿಸಿದ್ರು.

ಸ್ಥಳಕ್ಕಾಗಮಿಸಿದ ನೀತು ಪೋಷಕರು, ಆ ದೇಹದ ಕೈಕಾಲುಗಳು, ತಲೆ ಕೂದಲು ನೋಡಿ ತಮ್ಮ ಮಗಳದ್ದೇ ಅಂತಾ ತಿಳಿಸಿದ್ರು. ಆದ್ರೆ ಮೃತದೇಹದ ಮುಖ ಗುರುತಿಸಲಸಾಧ್ಯವಾಗಿತ್ತು. ಹೀಗಾಗಿ ಕೈಕಾಲುಗಳಿಂದಲೇ ಇದು ತಮ್ಮ ಮಗಳ ದೇಹ ಅಂತಾ ಸರ್ವೇಶ್ ದಂಪತಿ ತಿಳಿಸಿದ್ರು. ಅಂತೆಯೇ ಆ ಮೃತದೇಹವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿದ್ರು. ಇತ್ತ ತನಿಖೆ ಚುರುಕುಗೊಳಿಸಿದ ಪೊಲೀಸರು, ನೀತು ಪತಿ ಮತ್ತು ಮಾವನನ್ನು ತೀವ್ರ ವಿಚಾರಣೆಗೊಳಪಡಿಸಿದ್ರು. ಆದ್ರೆ ತನಿಖೆಯಲ್ಲಿ ಅವರಿಬ್ಬರು ನಿರ್ದೋಷಿಗಳೆಂದು ತಿಳಿದು ಬಂದಿತು.

ಇತ್ತ ಅನುಮಾನ ಬಂದ ಪೊಲೀಸರು, ನೀತು ತಂದೆಯ ದಿನಸಿ ಅಂಗಡಿಗೆ ಬರುತ್ತಿದ್ದ ಗಿರಾಕಿಗಳ ಬಗ್ಗೆ ವಿಚಾರಿಸಿದ್ರು. ಆಗ ತಿಳಿದು ಬಂದಿದ್ದು, ಅಲ್ಲಿಗೆ ಪೂರನ್ ಎಂಬ ವ್ಯಕ್ತಿ ಪ್ರತಿನಿತ್ಯ ಬರುತ್ತಿದ್ದ ಎಂದು. ಈ ವೇಳೆ ಪೊಲೀಸರು ನೀತು ಪೋಷಕರನ್ನು ಸರಿಯಾಗಿ ವಿಚಾರಿಸಿದಾಗ ಆಕೆ ಪೂರನ್ ಜೊತೆ ವಾಸಿಸುತ್ತಿದ್ದಳು ಅಂತಾ ಒಪ್ಪಿಕೊಂಡರು. ನಂತರ ಪೂರನ್ ಕೂಡಾ ನೀತು ತನ್ನ ಬಳಿ ಇದ್ದಳು ಇಬ್ಬರು ಇತಾದಲ್ಲಿ ಒಟ್ಟಿಗೆ ಇದ್ದೆವು. ಇದೇ ಕಾರಣಕ್ಕೆ ಪೋಷಕರು ಮತ್ತು ನೀತು ನಡುವೆ ತೀವ್ರ ವಾಗ್ವಾದವಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಅಂತಾ ವಿಚಾರಣೆ ವೇಳೆ ಪೂರನ್ ತಿಳಿಸಿದ್ದಾನೆ. ಇತ್ತ ನೀತುಳನ್ನ ಪತ್ತೆ ಹಚ್ಚಿದ ಪೊಲೀಸರು ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ. ಇನ್ನು ಆ ಹೆದ್ದಾರಿಯಲ್ಲಿ ಸಿಕ್ಕ ಮಹಿಳೆಯ ದೇಹ ಯಾರದ್ದು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...