alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬ ಹುಡುಗ, 3 ಹುಡುಗಿಯರು: ಠಾಣೆಯಲ್ಲಿ ನಡೀತು ಹೈಡ್ರಾಮಾ

ಸಿನಿಮಿಯ ರೀತಿಯ ಘಟನೆಯೊಂದು ನೋಯ್ಡಾದಲ್ಲಿ ನಡೆದಿದೆ. ಒಂದು ಹುಡುಗನ ಹಿಂದೆ ಮೂರು ಹೆಣ್ಣು ಮಕ್ಕಳು ಬಿದ್ದಿದ್ದಾರೆ. ಮದುವೆಯಾಗುವ ಗಲಾಟೆಯಲ್ಲಿ ಪೊಲೀಸ್ ಠಾಣೆಯಲ್ಲಿಯೇ ಹುಡುಗಿಯೊಬ್ಬಳು ತನ್ನ ಕೈ ಕತ್ತರಿಸಿಕೊಂಡಿದ್ದಾಳೆ.

ಮೂಲತಃ ಬುಲಂದಶಹರ್ ನಿವಾಸಿ ಹುಡುಗ ಅದೇ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ. ನೋಯ್ಡಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಕಚೇರಿಯಲ್ಲಿ ಇನ್ನೊಂದು ಯುವತಿ ಪ್ರೀತಿಗೆ ಬಿದ್ದಿದ್ದಾನೆ. ಕಳೆದ 7 ವರ್ಷಗಳಿಂದ ಸಹೋದ್ಯೋಗಿ ಪ್ರೇಮಿ ಜೊತೆ ಲಿವ್ ಇನ್ ನಲ್ಲಿದ್ದಾನೆ. ಒಂದೇ ಬಾರಿ ಇಬ್ಬಿಬ್ಬರು ಹುಡುಗಿಯರ ಜೊತೆ ಪ್ರೀತಿ ನಾಟಕವಾಡ್ತಿದ್ದ ಯುವಕನಿಗೆ ಇನ್ನೊಬ್ಬಳ ಸ್ನೇಹ ಶುರುವಾಗಿದೆ.

ಕಚೇರಿ ಸಹೋದ್ಯೋಗಿ ತನ್ನ ಸ್ನೇಹಿತೆಯನ್ನು ಈತನಿಗೆ ಪರಿಚಯಿಸಿದ್ದಾಳೆ. ಅಷ್ಟೇ, ಆ ಹುಡುಗಿಯನ್ನೂ ತನ್ನ ಪ್ರೇಮ ಜಾಲಕ್ಕೆ ಬೀಳಿಸಿಕೊಂಡಿದ್ದಾನೆ. ಬೇರೆ ಬೇರೆ ಸಮಯದಲ್ಲಿ ಮೂವರನ್ನು ಭೇಟಿ ಮಾಡ್ತಿದ್ದ ಈತನ ಆಟ ತುಂಬಾ ದಿನ ನಡೆಯಲಿಲ್ಲ. ಪ್ರೇಮಿಯ ಸ್ನೇಹಿತನೊಬ್ಬ ಯುವಕನ ಬಣ್ಣ ಬಯಲು ಮಾಡಿದ್ದಾನೆ.

ಯುವಕನ ಒಬ್ಬಳು ಪ್ರೇಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಲ್ಲಿಗೆ ಅಚಾನಕ್ ಇನ್ನಿಬ್ಬರು ಹುಡುಗಿಯರು ಬಂದಿದ್ದಾರೆ. ಒಂದು ಗಂಟೆ ಕಾಲ ಅಲ್ಲಿ ಡ್ರಾಮಾ ನಡೆದಿದೆ. ಕೋಪಗೊಂಡ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...