alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತರ ಬಳಿ ಅಪ್ಪಿತಪ್ಪಿಯೂ ಮೊಬೈಲ್ ಕೊಟ್ಟೀರಿ ಜೋಕೆ…!

ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ಮಾರ್ಟ್ ಫೋನ್ ನಲ್ಲಿ ಅಡಕವಾಗಿರುವ ಇಂದಿನ ದಿನಗಳಲ್ಲಿ ಮೊಬೈಲ್ ಗಳನ್ನು ಅಪರಿಚಿತರ ಬಳಿ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ.

ನೋಯ್ಡಾದಲ್ಲಿ ಪರೀಕ್ಷಾ ಕೇಂದ್ರದ ಬಳಿಯಿದ್ದ ಸಿಗರೇಟು ಅಂಗಡಿಯ ಮಾಲೀಕನನ್ನು ನಂಬಿ ಮೊಬೈಲ್ ಕೊಟ್ಟು ಹೋದ ವಿದ್ಯಾರ್ಥಿಯೊಬ್ಬ ತನ್ನ ಪೇಟಿಎಂ ಅಕೌಂಟ್ ನಿಂದ ಬರೊಬ್ಬರಿ 21.5 ಸಾವಿರ ರೂ.ಗೆ ಪಂಗನಾಮ ಹಾಕಿಸಿಕೊಂಡಿದ್ದಾನೆ.

ಮೋಹಿತ್ ಎಂಬ ವಿದ್ಯಾರ್ಥಿಯೊಬ್ಬ ಇಲ್ಲಿನ ಸಿಡಿಎಸಿ ಸಂಸ್ಥೆಯ ಪರೀಕ್ಷಾ ಕೇದ್ರದಲ್ಲಿ ಕಂಪ್ಯೂಟರ್ ಪರೀಕ್ಷೆ ತೆಗೆದುಕೊಂಡಿದ್ದ. ಎಕ್ಸಾಮ್ ಹಾಲ್ ಗೆ ಮೊಬೈಲ್ ಒಯ್ಯುವುದಕ್ಕೆ ನಿಷೇಧ ಇದ್ದುದರಿಂದ ಪಕ್ಕದಲ್ಲೇ ಇದ್ದ ಸಿಗರೇಟ್ ಅಂಗಡಿ ಮಾಲೀಕನ ಬಳಿ ಕೊಟ್ಟು ಹೋಗಿದ್ದ. ಆದರೆ ಎಕ್ಸಾಮ್ ಮುಗಿದ ಬಳಿಕ ಮೊಬೈಲ್ ಹಿಂದಕ್ಕೆ ಪಡೆಯಬೇಕಾದರೆ ಮೋಹಿತ್ ಗೆ ಶಾಕ್ ಕಾದಿತ್ತು. ಕಾರಣ ಆತನ ಪೇಟಿಎಂನಲ್ಲಿದ್ದ 21.5 ಸಾವಿರ ಮತ್ತೊಂದು ಖಾತೆಗೆ ವರ್ಗಾವಣೆಯಾಗಿರುವುದು ಅರಿವಿಗೆ ಬಂದಿತ್ತು.

ಇದೀಗ ವಂಚನೆಗೊಳಗಾಗಿರುವ ಮೋಹಿತ್ ಪೇಟಿಎಂ ಕಸ್ಟಮರ್ ಕೇರ್ ಗೆ ದೂರು ನೀಡಿದ್ದು, ಆತನ ಹಣ ಹಿಂಪಾವತಿ ಮಾಡಲು ಕಂಪನಿ ಒಪ್ಪಿಕೊಂಡಿದೆ. ಇದೇ ವೇಳೆ ವಂಚಿಸಿರುವ ಸಿಗರೇಟ್ ಅಂಗಡಿ ಮಾಲೀಕನ ವಿರುದ್ಧ ಮೋಹಿತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 420 ಮತ್ತು ಐಟಿ ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...