alex Certify
ಕನ್ನಡ ದುನಿಯಾ       Mobile App
       

Kannada Duniya

ನೋಯ್ಡಾದಲ್ಲಿ ಸೇಲ್ ಆಗಿರೋ ಮದ್ಯದ ಮೌಲ್ಯವೆಷ್ಟು ಗೊತ್ತಾ?

ನೋಯ್ಡಾದ ಜನ ಮದ್ಯದ ಅಮಲಲ್ಲಿ ಮುಳುಗೇಳ್ತಿದ್ದಾರೆ. ಕಳೆದ 10 ತಿಂಗಳಲ್ಲಿ ಮದ್ಯಕ್ಕಾಗಿ ಜನ ಖರ್ಚು ಮಾಡಿರೋ ಹಣ ಕೇಳಿದ್ರೆ ನೀವು ಕೂಡ ದಂಗಾಗ್ತೀರಾ. 2017ರ ಎಪ್ರಿಲ್ 1ರಿಂದ 2018ರ ಜನವರಿ 31ರವರೆಗೆ ನೋಯ್ಡಾ ನಿವಾಸಿಗಳು ಮದ್ಯಕ್ಕಾಗಿ ಬರೋಬ್ಬರಿ 775 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

ಗೌತಮ್ ಬುದ್ಧ ನಗರವೊಂದರಲ್ಲೇ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ 930 ಕೋಟಿ ಮೌಲ್ಯದ ಮದ್ಯ ಮಾರಾಟವಾಗುವ ಅಂದಾಜಿದೆ. ದುಬಾರಿ ಮದ್ಯಗಳ ಮಾರಾಟ ಹೆಚ್ಚಿದೆ. ಅಷ್ಟೇ ಅಲ್ಲ ಮದ್ಯ ಸೇವನೆ ಮಾಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ ಅಂತಾ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

2017-18ರಲ್ಲಿ ಜನರು ಒಟ್ಟು 66.71 ಲಕ್ಷ ಲೀಟರ್ ಮದ್ಯವನ್ನು ಸೇವಿಸಿದ್ದಾರೆ. ಇದರಲ್ಲಿ 46.22 ಲಕ್ಷ ಬಾಟಲಿ ಮದ್ಯ ವಿದೇಶಿ ಬ್ರಾಂಡ್ ನದ್ದು. ಭಾರತದಲ್ಲೇ ತಯಾರಾದ 123 ಲಕ್ಷ ಬಾಟಲಿ ಮದ್ಯ ಕೂಡ ಮಾರಾಟವಾಗಿದೆ. ಯುವಕರು ಹೆಚ್ಚಾಗಿ ಬಿಯರ್ ಹೀರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...