alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯನ್ನು ಕಟ್ಟಡದಿಂದ ನೂಕಿತಂತೆ ‘ದೆವ್ವ’…!

noyda-dd

ನೋಯ್ಡಾ: ನೋಯ್ಡಾದಲ್ಲಿ 4 ಮಹಡಿ ಮೇಲಿಂದ ಗರ್ಭಿಣಿಯನ್ನು ‘ದೆವ್ವ’ ರೂಪಿ ಪತಿ ತಳ್ಳಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಫರಿ ಚೌಕಂಡಿ ನಿವಾಸಿ ಅಮರ್ ಸಿಂಗ್ ಎಂಬಾತ ತನ್ನ ಗರ್ಭಿಣಿ ಪತ್ನಿ ಬಬಿತಾರೊಂದಿಗೆ ಜಗಳವಾಡಿದ್ದು, ಆಕೆಯನ್ನು ಕಟ್ಟಡದಿಂದ ಕೆಳಕ್ಕೆ ತಳ್ಳಿದ್ದಾನೆ.

ಬೆಳಗಿನ ಜಾವ 4 ಗಂಟೆಗೆ ಈ ಕೃತ್ಯ ಎಸಗಿದ ಅಮರ್ ಸಿಂಗ್, ಬಬಿತಾರ ಸಹೋದರ ಸತೀಂದರ್ ಗೆ ಕರೆ ಮಾಡಿ, ದೆವ್ವ ಬಂದು ಬಬಿತಾಳನ್ನು ಕಟ್ಟಡದಿಂದ ತಳ್ಳಿದೆ ಎಂದು ಕತೆ ಹೇಳಿದ್ದಾನೆ.

ಅಮರ್ ಸಿಂಗ್ ಹಾಗೂ ಬಬಿತಾ ಅವರಿಗೆ 2016 ರಲ್ಲಿ ಮದುವೆಯಾಗಿದ್ದು, 8 ತಿಂಗಳ ಮಗುವಿದೆ. ಆಕೆ ಮತ್ತೆ ಗರ್ಭಿಣಿಯಾಗಿದ್ದು, ಅಮರ್ ಸಿಂಗ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಸತೀಂದರ್ ತಿಳಿಸಿದ್ದಾರೆ.

ಬಬಿತಾರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಮರ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಜಹೀರ್ ಖಾನ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...