alex Certify
ಕನ್ನಡ ದುನಿಯಾ       Mobile App
       

Kannada Duniya

ಮರದಲ್ಲಿ ನೇತಾಡುತ್ತಿತ್ತು ಸಹೋದರಿಯರ ಶವ

ನೊಯ್ಡಾದ ಬರೋಲಾ ಎಂಬ ಗ್ರಾಮದಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾಗಿದೆ. ಮರವೊಂದಕ್ಕೆ ಮೃತದೇಹ ನೇತಾಡುತ್ತಿತ್ತು. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. 18 ವರ್ಷದ ಲಕ್ಷ್ಮಿ ಹಾಗೂ 14 ವರ್ಷದ ನಿಶಾ ಮೃತ ಸಹೋದರಿಯರು.

ಕುಟುಂಬಸ್ಥರು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನೆಲೆಸಿದ್ದರಿಂದ ಲಕ್ಷ್ಮಿ ಹಾಗೂ ನಿಶಾ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ರು. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಯಾರಾದರೂ ಅವರನ್ನು ಕೊಂದು ಮರಕ್ಕೆ ನೇಣು ಹಾಕಿದ್ದಾರಾ ಅನ್ನೋದು ಸ್ಪಷ್ಟವಾಗಿಲ್ಲ.

ಮರದಲ್ಲಿ ನೇತಾಡುತ್ತಿದ್ದ ಮೃತದೇಹಗಳನ್ನು ನೋಡಿ ಗಾಬರಿಯಾದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತ ಸೋದರಿಯರು ಭೂಷಣ್ ವಾಲ್ಮೀಕಿ ಎಂಬಾತನ ಮಕ್ಕಳು. ಇದೊಂದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...