alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಹರಿದಾಡುತ್ತಿದೆ ‘ಡಾನ್ಸ್ ಅಂಕಲ್’ ರ ಮತ್ತೊಂದು ವಿಡಿಯೋ

ಮಧ್ಯಪ್ರದೇಶದ ಭೋಪಾಲ್ ನಿವಾಸಿ ಪ್ರೊಫೆಸರ್ ಸಂಜೀವ್ ಅಗರ್ವಾಲ್, ತಮ್ಮ ಡಾನ್ಸ್ ಕಾರಣಕ್ಕಾಗಿ ಇಂದು ಸ್ಟಾರ್ ಆಗಿದ್ದಾರೆ. ಸಂಬಂಧಿಯೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪತ್ನಿಯೊಂದಿಗೆ ಬಾಲಿವುಡ್ ನಟ ಗೋವಿಂದರ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದ ಸಂಜೀವ್ ಅಗರ್ವಾಲ್, ಇದಕ್ಕೆ ಈ ಪರಿಯ ಮೆಚ್ಚುಗೆ ಸಿಗುತ್ತದೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.

ಸಂಜೀವ್ ಅಗರ್ವಾಲ್ ಅವರ ಡಾನ್ಸ್ ವಿಡಿಯೋವನ್ನು ವ್ಯಕ್ತಿಯೊಬ್ಬರು, ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದು, ರಾತ್ರೋರಾತ್ರಿ ಸಂಜೀವ್ ಭಾರಿ ಜನಪ್ರಿಯತೆ ಗಳಿಸಲು ಕಾರಣವಾಗಿತ್ತು. ಸಂಜೀವರ ಡಾನ್ಸನ್ನು ಶ್ರೀ ಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಮೆಚ್ಚಿಕೊಂಡಿದ್ದರು.

ಇದಾದ ಬಳಿಕ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಸಂಜೀವ್ ಅಗರ್ವಾಲ್ ನೃತ್ಯವನ್ನು ತಾವು ತಮ್ಮ ತಾಯಿಯಿಂದ ಕಲಿತಿದ್ದು, ಬಾಲಿವುಡ್ ನಟ ಗೋವಿಂದ ತಮಗೆ ರೋಲ್ ಮಾಡೆಲ್ ಎಂದು ಹೇಳಿಕೊಂಡಿದ್ದರು.

ಈಗ ಸಂಜೀವ್ ಅಗರ್ವಾಲ್ ಅವರ ನೃತ್ಯದ ವಿಡಿಯೋವನ್ನು ಸ್ವತಃ ನಟ ಗೋವಿಂದ ವೀಕ್ಷಿಸಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಲಂಡನ್ ನಲ್ಲಿರುವ ನಟ ಗೋವಿಂದ, ಸಂಜೀವ್ ಅಗರ್ವಾಲ್ ಅವರ ನೃತ್ಯದ ವಿಡಿಯೋವನ್ನು ವೀಕ್ಷಿಸಿದ ಬಳಿಕ ತಮ್ಮ ಪತ್ನಿಗೂ ತೋರಿಸಿದ್ದಾಗಿ ಹೇಳಿದ್ದಾರೆ. ನೃತ್ಯ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲವೆಂಬುದನ್ನು ಸಂಜೀವ್ ನಿರೂಪಿಸಿದ್ದಾರೆಂದು ಗೋವಿಂದ ತಿಳಿಸಿದ್ದಾರೆ.

ನನ್ನಂತೆ ನೃತ್ಯ ಮಾಡಲು ಬಾಲಿವುಡ್ ನ ಹಲವು ನಟರು ಪ್ರಯತ್ನಿಸಿದ್ದಾರೆ. ಆದರೆ ಸಂಜೀವ್ ಅಗರ್ವಾಲ್ ಇವರೆಲ್ಲರನ್ನೂ ಮೀರಿಸುವಂತೆ ಡಾನ್ಸ್ ಮಾಡಿದ್ದಾರೆಂದು ಗೋವಿಂದ ಹೇಳಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ಮತ್ತೊಂದು ವಿಡಿಯೋ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...