alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಲಾಶ್ ಸತ್ಯರ್ಥಿ ಅವರ ನೊಬೆಲ್ ಪ್ರಶಸ್ತಿ ಪ್ರತಿಕೃತಿಗೆ ಕನ್ನ

kailash1

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯರ್ಥಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸದ್ಯ ಸತ್ಯರ್ಥಿ ಅವರು ಅಮೆರಿಕದಲ್ಲಿದ್ದಾರೆ. ಬೆಳಗಿನ ಜಾವ ದೆಹಲಿಯಲ್ಲಿರುವ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ನೊಬೆಲ್ ಪ್ರಶಸ್ತಿಯ ಪ್ರತಿಕೃತಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ನಿಯಮದಂತೆ ಮೂಲ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಇಡಲಾಗಿದೆ. ಸತ್ಯರ್ಥಿ ಅವರ ಮನೆಯಲ್ಲಿದ್ದಿದ್ದು ನಿಜವಾದ ನೊಬೆಲ್ ಪುರಸ್ಕಾರ ಎಂದುಕೊಂಡ ಕಳ್ಳರು ಅದನ್ನು ಹೊತ್ತೊಯ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಸ್ಕ್ರಾಪ್ ಡೀಲರ್ ಗಳು ಮತ್ತು ಸುತ್ತಮುತ್ತಲ ಏರಿಯಾದ ಕ್ರಿಮಿನಲ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ದೆಹಲಿಯ ಪ್ರತಿಷ್ಠಿತ ಅಲಕನಂದಾ ಬಡಾವಣೆಯಲ್ಲಿರುವ ಸತ್ಯರ್ಥಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿರೋದ್ರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...