alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ.ಗಳಲ್ಲಿ ಮೊದಲಿನಂತೆಯೇ ಸಿಗುತ್ತೆ ಹಣ

withdraw

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಮತ್ತು 1000 ರೂ. ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಬ್ಯಾಂಕ್ ಹಾಗೂ ಎ.ಟಿ.ಎಂ.ಗಳಿಂದ ಹಣ ಪಡೆದುಕೊಳ್ಳಲು ಮಿತಿ ಹೇರಲಾಗಿತ್ತು.

ಮೊದಲಿಗೆ 2000 ರೂ. ಮಾತ್ರ ಪಡೆದುಕೊಳ್ಳಲು ಅವಕಾಶವಿತ್ತು. ನಂತರದಲ್ಲಿ 2500 ರೂ, ಬಳಿಕ 4500 ರೂ. ಹಾಗೂ ವಾರಕ್ಕೆ 24,000 ರೂ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

ಮೊದಲಿಗೆ ಎ.ಟಿ.ಎಂ. ಬ್ಯಾಂಕ್ ಗಳ ಎದುರು ಕಂಡು ಬರುತ್ತಿದ್ದ ಸರತಿ ಸಾಲು ಕಡಿಮೆಯಾಗಿದೆ. ಅಲ್ಲದೇ, ದೇಶಾದ್ಯಂತ  ಎ.ಟಿ.ಎಂ.ಗಳಿಗೆ ಪ್ರತಿದಿನ ಪೂರೈಕೆಯಾಗುತ್ತಿದ್ದ 2000-3000 ಕೋಟಿ ರೂ. ನಿಧಾನಗತಿಯಲ್ಲಿ ಏರಿಕೆಯಾಗಿ 9000 ಕೋಟಿ ರೂ ತಲುಪಿದೆ.

ನೋಟ್ ಬ್ಯಾನ್ ಬಳಿಕ ಪರಿಸ್ಥಿತಿ ಸುಧಾರಿಸತೊಡಗಿದೆ. ನಗದು ಪೂರೈಕೆ ಮೊದಲಿನ ಸ್ಥಿತಿಗೆ ಬಂದಿರುವುದರಿಂದ ಜನವರಿ ಅಂತ್ಯದೊಳಗೆ ಹಣ ವಿತ್ ಡ್ರಾ ಲಿಮಿಟ್ ತೆಗೆಯಲಾಗುತ್ತದೆ.

ಫೆಬ್ರವರಿ ಮೊದಲ ವಾರದಿಂದ ಎ.ಟಿ.ಎಂ. , ಬ್ಯಾಂಕ್ ಗಳಲ್ಲಿ ಹಿಂದಿನಂತೆಯೇ ಹಣ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...