alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್, ಮಾಯಾವತಿ ಸೆಕ್ಯೂರಿಟಿಗೆ ಯೋಗಿ ಬ್ರೇಕ್

security

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕಲು ಕಸರತ್ತು ಆರಂಭಿಸಿದೆ. ಈಗಾಗ್ಲೇ  ಪ್ರತಿಪಕ್ಷಗಳ ಹಲವು ಪ್ರಮುಖ ನಾಯಕರ ಭದ್ರತೆಯನ್ನು ಕಡಿಮೆ ಮಾಡಿದೆ.

ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್, ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಯಾದವ್, ಅಜಂ ಖಾನ್, ಡಿಂಪಲ್ ಯಾದವ್, ರಾಮ್ ಗೋಪಾಲ್ ಯಾದವ್ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರ ಭದ್ರತೆಯನ್ನು ಕಡಿಮೆ ಮಾಡಲಾಗಿದೆ.

ಆದ್ರೆ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅವರಿಗೆ ಝೆಡ್ ಮಾದರಿಯ ಭದ್ರತೆ ಕಲ್ಪಿಸಲಾಗಿದೆ. ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉತ್ತರಪ್ರದೇಶದ ಗೃಹ ಕಾರ್ಯದರ್ಶಿ, ಡಿಜಿಪಿ, ಗುಪ್ತಚರ ಇಲಾಖೆಯ ಎಡಿಜಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಈ ಆದೇಶವನ್ನು ಜಾರಿ ಮಾಡಲಾಗಿದೆ.

ಇದುವರೆಗೆ ಆದಿತ್ಯನಾಥ್ ಸರ್ಕಾರ 45 ವಿಐಪಿಗಳ ಭದ್ರತೆಯನ್ನು ಇಳಿಕೆ ಮಾಡಿದ್ದು, 105 ಜನರ ಸೆಕ್ಯೂರಿಟಿಯನ್ನು ಸಂಪೂರ್ಣ ತೆಗೆದುಹಾಕಿದೆ. ಭದ್ರತಾ ವ್ಯವಸ್ಥೆ ಕಳೆದುಕೊಂಡವರಲ್ಲಿ ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ ಕೂಡ ಒಬ್ಬರು. ಪ್ರತಿಷ್ಠೆಗಾಗಿ ಸೆಕ್ಯೂರಿಟಿ ಇಟ್ಟುಕೊಂಡಿರುವ ಎಲ್ಲರ ಭದ್ರತೆಯನ್ನೂ ತೆಗೆದುಹಾಕುವುದಾಗಿ ಈ ಹಿಂದೆಯೇ ಯೋಗಿ ಎಚ್ಚರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...