alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಸಿಕ ಅಸ್ವಸ್ಥನನ್ನು ಪಿಲ್ಲರ್ ಗೆ ಕಟ್ಟಿದ ಪೊಲೀಸರು

ಮಧ್ಯ ಪ್ರದೇಶದ ಶಿಯೋಪುರ್ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಕಾರಣ, ಪೊಲೀಸರು ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಯ ಪಿಲ್ಲರ್ ಗೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಪಂಚಾಯತ್ ಅಧ್ಯಕ್ಷೆ ಕವಿತಾ ಮೀನಾ ಎಂಬವರ ಮನೆಗೆ ಈ ಮಾನಸಿಕ ಅಸ್ವಸ್ಥ ನುಗ್ಗಿದ್ದು, ಕಳ್ಳನಿರಬಹುದೆಂದು ಭಾವಿಸಿದ ಕವಿತಾ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೂ ಈತ ಕಲ್ಲು ತೂರಾಟ ನಡೆಸಿದ್ದಾನೆ. ಹರಸಾಹಸ ಪಟ್ಟು ಪೊಲೀಸರು ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ಕರೆತಂದು, ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ಪೊಲೀಸರು ಆತನನ್ನು ಪಿಲ್ಲರ್ ಗೆ ಕಟ್ಟಿ ಹಾಕಿದ್ದಾರೆ. ವ್ಯಕ್ತಿಯೊಬ್ಬನನ್ನು ಆಸ್ಪತ್ರೆಯಲ್ಲಿ ಕಟ್ಟಿ ಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇದು ವೈರಲ್ ಆಗಿದ್ದು, ಬಳಿಕ ದಾಖಲು ಮಾಡಿಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...