alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಹೈದ್ರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಯ ದುಃಸ್ಥಿತಿ

baby

ಹೈದ್ರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಡ್ರಿಪ್ ಹಾಕಿದ್ದ ಮಗುವನ್ನು ಸಾಗಿಸಲು ಸ್ಟ್ರೆಚರ್ ಕೂಡ ನೀಡಿಲ್ಲ. ಸಂಬಂಧಿಕರು ಡ್ರಿಪ್ಸ್ ಸಮೇತ ಮಗುವನ್ನು ಎತ್ತಿಕೊಂಡೇ ಹೋಗಿದ್ದಾರೆ. ಸರ್ಕಾರವೇ ನಡೆಸ್ತಾ ಇರೋ ನಿಲೋಫರ್ ಆಸ್ಪತ್ರೆಯ ನಿರ್ಲಕ್ಷ್ಯ ತೀವ್ರ ಟೀಕೆಗೆ ಗುರಿಯಾಗಿದೆ.

ಹಳೆ ಕಟ್ಟಡದಲ್ಲಿದ್ದ ಮಗುವನ್ನು ಡ್ರಿಪ್ಸ್ ಹಾಗೂ ಆಕ್ಸಿಜನ್ ಸಮೇತ ಹೊಸ ಕಟ್ಟಡಕ್ಕೆ ಎತ್ತಿಕೊಂಡೇ ಬರಲಾಗಿದೆ. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಗಳ ಕೊರತೆ ಇದ್ದು, ಇದ್ರಿಂದ ರೋಗಿಗಳು ಪರದಾಡಬೇಕಾಗಿದೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೆ ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ರೋಗಿಯೊಬ್ಬನಿಗೆ ಸಿಬ್ಬಂದಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಿರಲಿಲ್ಲ. ಇದ್ರಿಂದ ರೋಗಿ ಮಗನ ಪುಟ್ಟ ಮೂರು ಚಕ್ರದ ಸೈಕಲ್ ನಲ್ಲೇ ಆಸ್ಪತ್ರೆಯ ವಾರ್ಡ್ ಗೆ ತೆರಳಿದ್ದ. ವ್ಹೀಲ್ ಚೇರ್ ಕೇಳಿದ್ರೆ ಆಸ್ಪತ್ರೆ ಸಿಬ್ಬಂದಿ ಲಂಚ ಕೇಳ್ತಾರೆ ಅಂತಾ ರೋಗಿಯ ಪತ್ನಿ ಆರೋಪಿಸಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...