alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಹತ್ವದ ಸೂಚನೆ

ವಿಮಾನ ನಿಲ್ದಾಣದ ಭದ್ರತೆಗಾಗಿ ನಿಲ್ಲುವಾಗ, ಬಂದೂಕು ಪಕ್ಕಕ್ಕಿಟ್ಟುಕೊಂಡು ಕಠಿಣವಾಗಿರುತ್ತಿದ್ದ ಭದ್ರತಾ ಸಿಬ್ಬಂದಿಗಳು ಇದೀಗ ಅಲ್ಪಸ್ವಲ್ಪ ಮುಗುಳು ನಗೆಯನ್ನೂ ಪಕ್ಕಕ್ಕಿಟ್ಟು ಕೆಲಸ ಮಾಡುತ್ತಾರಂತೆ.

ಹೌದು, ಭದ್ರತಾ ಸಿಬ್ಬಂದಿಗೆ ಸರಕಾರ ಈ ಸೂಚನೆ ನೀಡಿದ್ದು, ದೇಶದ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಎಸ್ಐಎಫ್ ಯೋಧರು, ಅಗತ್ಯವಿರುವಷ್ಟು ಮಾತ್ರ ಮುಗುಳು ನಗೆಯನ್ನು ಬೀರಿ ಎಂದಿದ್ದಾರಂತೆ. ಪ್ರಯಾಣಿಕರೊಂದಿಗೆ ಹೆಚ್ಚು ಸ್ನೇಹ ಬೆಳಸಿಕೊಳ್ಳಬೇಡಿ ಎಂದು ಸೂಚಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಿಎಸ್ಐಎಫ್ ನಿರ್ದೇಶಕ ಜನರಲ್ ರಾಜೇಶ್ ರಂಜನ್, ಪ್ರಯಾಣಿಕರ ಹಿತದೃಷ್ಠಿಯಿಂದ ಭದ್ರತಾ ಸಿಬ್ಬಂದಿಗಳು, ಪ್ರಯಾಣಿಕರೊಂದಿಗೆ ಹೆಚ್ಚು ಸಲುಗೆಯಿಂದ ವರ್ತಿಸಲು ಸಾಧ್ಯವಿಲ್ಲ. ಮುಂಬೈ ದಾಳಿಯನ್ನು ನೆನಪಿಸಿಕೊಂಡಿರುವ ಅವರು, ಸುರಕ್ಷತಾ ದೃಷ್ಠಿಯಿಂದ ವಿಮಾನ ನಿಲ್ದಾಣದ ಸಿಬ್ಬಂದಿಗಳು ಕೆಲ ವೇಳೆ ಕಠಿಣವಾಗಬೇಕಾಗುತ್ತದೆ ಎಂದಿದ್ದಾರೆ.

ಪ್ರಯಾಣಿಕರಿಗೆ ಸಂಸ್ಥೆಗಳು ನೀಡುತ್ತಿರುವ ಹಲವು ರಿಯಾಯಿತಿ ಹಾಗೂ ಕಡಿಮೆ ದರದಲ್ಲಿ ಟಿಕೆಟ್ ಗಳು ಲಭ್ಯವಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ಭಾರತ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸುವವರ ಸಂಖ್ಯೆ ಏರುತ್ತಿದೆ.

ಕಳೆದೊಂದು ದಶಕದಲ್ಲಿ ಸುಮಾರು ಆರು ಪಟ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಅಗತ್ಯವಿರುವ ಮೂಲಸೌಲಭ್ಯ ಹಾಗೂ ಭದ್ರತೆಯನ್ನು ಹೆಚ್ಚಿಸಬೇಕಿದೆ. ಆದ್ದರಿಂದ ಭದ್ರತಾ ಸಿಬ್ಬಂದಿಗಳಿಗೆ ಪ್ರಯಾಣಿಕರೊಂದಿಗೆ ಅಂತರ ಕಾಯ್ದುಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...