alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಉಟ್ಟ ಸ್ತ್ರೀಯರಿಗೆ ಮಾತ್ರ ಪದ್ಮನಾಭಸ್ವಾಮಿ ದೇಗುಲಕ್ಕೆ ಪ್ರವೇಶ

temple

ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಸೀರೆ ಉಟ್ಟ ಮಹಿಳೆಯರಿಗೆ ಮಾತ್ರ ಪ್ರವೇಶ ಅಂತಾ ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಲ್ವಾರ್ ಕಮೀಜ್ ಹಾಗೂ ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಅನುಮತಿಯಿಲ್ಲ ಅಂತಾ ಕೋರ್ಟ್ ಹೇಳಿದೆ.

ಸಂಪ್ರದಾಯದ ಪ್ರಕಾರ ಚೂಡಿದಾರ್ ಅಥವಾ ಸಲ್ವಾರ್ ಕಮೀಜ್ ಧರಿಸಿ ಬಂದ ಸ್ತ್ರೀಯರು ಅದರ ಮೇಲೆ ಮುಂಡು ಅಥವಾ ಧೋತಿ ಉಟ್ಟುಕೊಳ್ಳಬೇಕು. ಯಾರು ಸೀರೆ ಉಟ್ಟಿರ್ತಾರೋ ಅವರಿಗೆ ಮಾತ್ರ ದೇವಾಲಯದ ಒಳಕ್ಕೆ ಪ್ರವೇಶಿಸಲು ಅನುಮತಿಯಿದೆ ಅಂತಾ ಕೋರ್ಟ್ ಹೇಳಿದೆ.

ಕಳೆದ ನವೆಂಬರ್ 30 ರಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಸತೀಶ್ ಚೂಡಿದಾರ್ ಧರಿಸಿದ್ದ ಮಹಿಳೆಯರಿಗೆ ಒಳ ಪ್ರವೇಶಿಸಲು ಅನುಮತಿಸಿದ್ದರು. ಇದನ್ನು ವಿರೋಧಿಸಿ ದೇವಾಲಯ ಆಡಳಿತ ಮಂಡಳಿಯ ಕೆಲ ಅಧಿಕಾರಿಗಳು ಹಾಗೂ ಭಕ್ತರು ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...