alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ರಾಹುಲ್ ಮಾನಸ ಸರೋವರ ಯಾತ್ರೆ ಫೋಟೋ…!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೈಲಾಸ ಮಾನಸ ಸರೋವರಕ್ಕೆ ಯಾತ್ರೆಗೆ ತೆರಳಿರುವ ಸುದ್ದಿ ನಿಮಗೆಲ್ಲರಿಗೂ ಗೊತ್ತೇ ಇದೆ. ಪ್ರವಾಸದ ವೇಳೆ ರಾಹುಲ್ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ಹೌದು….ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪ್ರವಾಸದ ಮೊದಲ ಫೋಟೋ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಮಾನಸ ಸರೋವರದ ಪ್ರಕೃತಿ ಸೌಂದರ್ಯವನ್ನು ಈ ಫೋಟೋದಲ್ಲಿ ಕಾಣಬಹುದು. ಈ ಟ್ವೀಟ್ ಸದ್ಯ ಸಖತ್ ವೈರಲ್ ಆಗಿದೆ. ನೆಟ್ಟಿಗರು ರಾಹುಲ್ ಹಾಕಿದ ಫೋಟೋದ ಹಿಂದೆ ಬಿದ್ದು, ಮಣ್ಣು ಮುಕ್ಕಿದ್ದಾರೆ.

ಈ ಬಗ್ಗೆ ನೆಟ್ಟಿಗರು ಅಂತಾರ್ಜಾಲದಲ್ಲಿ ಕೆಲ ಫೋಟೋಗಳನ್ನು ಹುಡುಕಿದ್ದಾರೆ. ಇಂಟರ್ ನೆಟ್ ನಲ್ಲಿ ಲಭ್ಯವಿರುವ ಕೆಲವು ಫೋಟೋಗಳು ಹಾಗೂ ರಾಹುಲ್ ಹಾಕಿರುವ ಫೋಟೋಗೆ ಸಾಮ್ಯತೆ ಇರೋದಾಗಿ ತಿಳಿಸಲಾಗಿದೆ. ಈ ಪೋಟೋ ಅಪ್ ಲೋಡ್ ಆಗುತ್ತಿದ್ದಂತೆ ಹಲವರು ಕಾರ್ಯ ಪ್ರವೃತ್ತರಾಗಿದ್ದಾರೆ.

ವಿಕಾಸ್ ಪಾಂಡ್ಯ ಎಂಬವರು, ಅಂತರ್ಜಾಲದಲ್ಲಿನ ಫೋಟೋ ತೆಗೆದು, ರಾಹುಲ್ ಟ್ವೀಟ್ ಮಾಡಿರುವ ಫೋಟೋ ಹಾಗೂ ಗೂಗಲ್ ನಲ್ಲಿ ಸಿಕ್ಕ ಫೋಟೋಗೂ ವ್ಯತ್ಯಾಸ ಕಾಣೋದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರೀತಿ ಗಾಂಧಿ ಸಹ, ಕೆಲವು ಫೋಟೋಗಳನ್ನು ಟ್ವಿಟರ್ ನಲ್ಲಿ ಹಾಕಿದ್ದು, ಅಂರ್ತಜಾಲದಲ್ಲಿನ ಫೋಟೋ ಅಪಲೋಡ್ ಮಾಡಿದ್ದೀರಾ…? ಸದ್ಯ ಮಾನಸ ಸರೋವರದಲ್ಲಿಯೇ ಇರುವಿರೋ ಅಥವಾ ಬೇರೆ ಪ್ರದೇಶದಲ್ಲಿ ಇರುವಿರೋ ಎಂದು ಟ್ವೀಟ್ ಮಾಡಿದ್ಧಾರೆ.

ಆದರೆ ಟೈಮ್ಸ್ ಆಫ್ ಇಂಡಿಯಾ ಈ ಎಲ್ಲ ಫೋಟೋಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದು, ರಾಹುಲ್ ಅಪ್ ಲೋಡ್ ಮಾಡಿದ್ದ ಫೋಟೋ ಅಂತರ್ಜಾಲದ್ದಲ್ಲ ಎಂಬುದನ್ನು ಖಚಿತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...