alex Certify
ಕನ್ನಡ ದುನಿಯಾ       Mobile App
       

Kannada Duniya

15 ತಿಂಗಳುಗಳಿಂದ ಕರೆಂಟಿಲ್ಲ, ಆದ್ರೂ ಬಂತು ಬಿಲ್ !

NO POWER BILLಕಳೆದ 15 ತಿಂಗಳುಗಳಿಂದ ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ಶಿಗೋನ್ ನಲ್ಲಿರುವ ಆ ಗುಡಿಸಲಲ್ಲಿ ಅಂಧಕಾರ. ದಮ್ಮಯ್ಯ ಸ್ವಾಮಿ ಕರೆಂಟ್ ಕನೆಕ್ಷನ್ ಕೊಡಿ ಅಂದ್ರೆ ರಾಮು ಹೇಮಡಾ ಅವರ ಕೈಗೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ನಿಗಮ ಬಿಲ್ ಕೊಟ್ಟಿದೆ.

ಅದು ಕೂಡ 5000 ರೂಪಾಯಿ ಮೊತ್ತದ ಕರೆಂಟ್ ಬಿಲ್. ಬುಡಕಟ್ಟು ಜನಾಂಗಕ್ಕೆ ಸೇರಿದ ರಾಮು ತುಂಡು ಭೂಮಿಯಲ್ಲಿ ಗುಡಿಸಲು ಕಟ್ಟಿಕೊಂಡು ಪತ್ನಿ ಜೊತೆ ಬದುಕುತ್ತಿದ್ದಾರೆ. ಕಳೆದ ವರ್ಷ 600 ರೂಪಾಯಿ ಕರೆಂಟ್ ಬಿಲ್ ಕಟ್ಟಿಲ್ಲ ಅನ್ನೋ ಕಾರಣಕ್ಕೆ ವಿದ್ಯುತ್ ನಿಗಮ ರಾಮು ಅವರ ಮನೆಗಿದ್ದ ವಿದ್ಯುತ್ ಸಂಪರ್ಕವನ್ನೇ ತೆಗೆದುಹಾಕಿತ್ತು.

ನಂತರ ಅವರು ಬಡ್ಡಿ ಸಮೇತ ಬಿಲ್ ಭರ್ತಿ ಮಾಡಿದ್ದಾರೆ. ಹತ್ತಾರು ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ಮಾತ್ರ ರಾಮು ಅವರ ಮನೆಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. 15 ತಿಂಗಳು ಕರೆಂಟ್ ಕನೆಕ್ಷನ್ ಇಲ್ಲದೇ ಇದ್ರೂ 5130 ರೂಪಾಯಿ ಮೊತ್ತದ ಬಿಲ್ ಅನ್ನ ಕಳಿಸಿದ್ದಾರೆ. 826 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದಾರೆಂದು ಬಿಲ್ ನಲ್ಲಿ ನಮೂದಿಸಲಾಗಿದೆ, ಆದ್ರೆ ಕನೆಕ್ಷನ್ ಇಲ್ಲದೇ ಇದ್ಮೇಲೆ ವಿದ್ಯುತ್ ಬಳಸಲು ಹೇಗೆ ಸಾಧ್ಯ ಅನ್ನೋದು ರಾಮು ಅವರ ಪ್ರಶ್ನೆ. ಪ್ರತಿ ವಾರ ವಿದ್ಯುತ್ ಇಲಾಖೆಗೆ ಅಲೆದ್ರೂ ಪ್ರಯೋಜನವಾಗ್ತಿಲ್ಲ ಅನ್ನೋದು ಅವರ ಅಳಲು. ಇದೀಗ ರಾಮು ಅವರ ಗುಡಿಸಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಇಲಾಖೆಯ ಜೂನಿಯರ್ ಎಂಜಿನಿಯರ್ ಒಬ್ರು ತಿಳಿಸಿದ್ದಾರೆ, ಆದ್ರೆ ಬಿಲ್ ಬಗ್ಗೆ ಸೊಲ್ಲೆತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...