alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ ಐದು ವರ್ಷಗಳಿಂದ ಒಬ್ಬ ರೋಗಿಯೂ ಭೇಟಿ ನೀಡಿಲ್ಲ ಈ ಆಸ್ಪತ್ರೆಗಳಿಗೆ…!

ರಾಜಸ್ತಾನದ 40 ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಸತತ ಐದು ವರ್ಷಗಳಿಂದ ಒಬ್ಬನೇ ಒಬ್ಬ ರೋಗಿಯೂ ದಾಖಲಾಗಿಲ್ಲ ಅನ್ನೋ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ 645 ಔಷಧಾಲಯಗಳಿಗೆ ವೈದ್ಯಕೀಯ ಅಧಿಕಾರಿ ಕೂಡ ನೇಮಕವಾಗಿಲ್ಲ ಅನ್ನೋ ಕೌತುಕದ ವಿಚಾರ ಬಹಿರಂಗಗೊಂಡಿದೆ.

ಕೇಂದ್ರದ ಮಹಾ ಲೆಕ್ಕ ಪರಿಶೋಧಕರು ನೀಡಿರುವ ಮಾಹಿತಿಯ ಪ್ರಕಾರ 2655.89 ಕೋಟಿ ರೂಪಾಯಿಗಳನ್ನು ಐದು ವರ್ಷಗಳಲ್ಲಿ 40 ಆಸ್ಪತ್ರೆಗಳ ಖರ್ಚಿಗಾಗಿ ಮೀಸಲಿಡಲಾಗಿತ್ತು. ಆದ್ರೆ ಇದರಲ್ಲಿ ಸಿಬ್ಬಂದಿಯ ವೇತನ ಮತ್ತು ಭತ್ಯೆಗಳ ಹೊರತಾಗಿ ಉಳಿದ ವೆಚ್ಚಗಳಿಗೆ ಯಾವುದೇ ಹಣ ಖರ್ಚಾಗಿಲ್ಲ.

2012ರಿಂದ 2017ರ ಅವಧಿಯಲ್ಲಿ ರಾಜಸ್ಥಾನದ 40 ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಯಾವೊಬ್ಬ ರೋಗಿಯೂ ದಾಖಲಾಗಿಲ್ಲ. ಐದು ವರ್ಷಗಳ ಹಿಂದೆ ಇಂತಾ ಆಸ್ಪತ್ರೆಗಳ ಸಂಖ್ಯೆ 40 ಇತ್ತು. ನಾಲ್ಕು ವರ್ಷಗಳ ಹಿಂದೆ ಅದರ ಸಂಖ್ಯೆ 48 ಆಗಿ, ಮೂರು ವರ್ಷಗಳಿಂದ 49 ಆಸ್ಪತ್ರೆಗಳಿಗೆ ಏರಿಕೆಯಾಗಿದೆ.

2012-13ನೇ ಸಾಲಿನಲ್ಲಿ ರಾಜಸ್ಥಾನದ 118 ಆಸ್ಪತ್ರೆಗಳ ಪೈಕಿ 60 ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾಗಿಲ್ಲ. 2016-17ನೇ ಸಾಲಿನಲ್ಲಿ ಈ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಹೀಗೆ ರೋಗಿಗಳಿಲ್ಲದ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಮೂಲ ಸೌಕರ್ಯಗಳು ಕಡಿಮೆ ಅನ್ನುವ ಕಾರಣಕ್ಕೆ ಈ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗ್ತಿದೆ ಅಂತ ಸಿಎಜಿ ವರದಿ ಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...