alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರಿಗೂ ಬೇಡವಾಗಿದೆ ನಿಷೇಧಿತ ನೋಟು..!

coin-1

ನಿಷೇಧಿತ ಹಳೆಯ ನೋಟು ಈಗ ಕಳ್ಳರಿಗೂ ಬೇಡವಾಗಿದೆ. ಉತ್ತರ ಪ್ರದೇಶದ ಗೋರಾಬಜಾರ್ ನಲ್ಲಿರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳರು 1 ರೂಪಾಯಿ ನಾಣ್ಯಗಳನ್ನು ಕಳವು ಮಾಡಿದ್ದಾರೆ.

500 ಮತ್ತು 1000 ರೂಪಾಯಿ ನೋಟುಗಳನ್ನು ಕಳ್ಳರು ಮುಟ್ಟೇ ಇಲ್ಲ, ಬದಲಾಗಿ 1 ರೂಪಾಯಿ ನಾಣ್ಯಗಳ ಒಂದು ಲಕ್ಷ ರೂಪಾಯಿಯನ್ನು ಎಗರಿಸಿದ್ದಾರೆ. ಬ್ಯಾಂಕ್ ನ ಸಿಸಿ ಟಿವಿ ಧ್ವಂಸ ಮಾಡಿ ಕಳ್ಳರ ಗ್ಯಾಂಗ್ ಒಳನುಗ್ಗಿದೆ. ಒಂದು ರೂಪಾಯಿ ನಾಣ್ಯಗಳಿದ್ದ ದೊಡ್ಡ ಚೀಲವನ್ನೇ ಹೊತ್ತುಕೊಂಡು ಪರಾರಿಯಾಗಿದೆ. ಶನಿವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಶುಕ್ರವಾರ ನಾಣ್ಯವನ್ನು ಕೊಟ್ಟು ನೋಟು ಪಡೆದುಕೊಳ್ಳಲು ಬ್ಯಾಂಕ್ ಸಿಬ್ಬಂದಿ ಮುಂದಾಗಿದ್ರು. ಆದ್ರೆ ರಷ್ ಇದ್ದಿದ್ರಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸಂಗ್ರಹವಾದ ಹಳೆ ನೋಟುಗಳು ಮತ್ತು 1 ರೂಪಾಯಿ ನಾಣ್ಯಗಳ 1 ಲಕ್ಷ ರೂ. ಇದ್ದ ಚೀಲವನ್ನು ಸುರಕ್ಷಿತವಾಗಿಟ್ಟು ಸಿಬ್ಬಂದಿ ಮನೆಗೆ ತೆರಳಿದ್ರು. ರಾತ್ರಿ ಬ್ಯಾಂಕ್ ಗೆ ಕನ್ನ ಹಾಕಿದ ಕಳ್ಳರು ಹಳೆ ನೋಟುಗಳನ್ನು ಕಣ್ಣೆತ್ತಿಯೂ ನೋಡಿಲ್ಲ, ನಾಣ್ಯದ ಚೀಲವನ್ನು ಹೊತ್ತುಕೊಂಡು ಹೋಗಿದ್ದಾರೆ. ನಾಣ್ಯ ತಂದಿಟ್ಟಿರುವ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...