alex Certify
ಕನ್ನಡ ದುನಿಯಾ       Mobile App
       

Kannada Duniya

”ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲಬೇಕೆಂದಿಲ್ಲ”

sc

ರಾಷ್ಟ್ರಗೀತೆ, ಸಿನಿಮಾ ಅಥವಾ ಡಾಕ್ಯುಮೆಂಟರಿಯ ಭಾಗವಾಗಿದ್ದಲ್ಲಿ ಚಿತ್ರಮಂದಿರಗಳಲ್ಲಿ ಅದರ ಪ್ರಸಾರದ ಸಂದರ್ಭದಲ್ಲಿ ಪ್ರೇಕ್ಷಕರು ಎದ್ದು ನಿಲ್ಲಬೇಕೆಂದಿಲ್ಲ ಅಂತಾ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂಬೈನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಮುಂಬೈನ ಥಿಯೇಟರ್ ಒಂದರಲ್ಲಿ ‘ದಂಗಲ್’ ಚಿತ್ರ ಪ್ರದರ್ಶನಗೊಳ್ತಾ ಇತ್ತು. ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು, ಈ ವೇಳೆ 59 ವರ್ಷದ ವ್ಯಕ್ತಿಯೊಬ್ಬ ಎದ್ದು ನಿಂತಿಲ್ಲ ಅನ್ನೋ ಕಾರಣಕ್ಕೆ ಗುಂಪೊಂದು ಆತನನ್ನು ಥಳಿಸಿತ್ತು.

ಈ ಘಟನೆ ಕೋರ್ಟ್ ಮೆಟ್ಟಿಲೇರಿತ್ತು, ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎದ್ದು ನಿಲ್ಲಲೇಬೇಕು ಎಂದೇನಿಲ್ಲ ಅಂತಾ ಹೇಳಿದೆ. ಇನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್, ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಪ್ರೇಕ್ಷಕರೆಲ್ಲ ಕಡ್ಡಾಯವಾಗಿ ಎದ್ದುನಿಲ್ಲಬೇಕೆಂದು ಹೇಳಿತ್ತು. ರಾಷ್ಟ್ರಗೀತೆ ವೇಳೆ ಎದ್ದುನಿಂತಿಲ್ಲ ಅನ್ನೋ ಕಾರಣಕ್ಕೆ ಹಲವು ಕಡೆಗಳಲ್ಲಿ ಪ್ರೇಕ್ಷಕರ ಮೇಲೆ ಹಲ್ಲೆ ನಡೆದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...