alex Certify
ಕನ್ನಡ ದುನಿಯಾ       Mobile App
       

Kannada Duniya

‘ದೇಶಭಕ್ತಿ ತೋರಿಸಲು ಸಿನಿಮಾ ಮಂದಿರದಲ್ಲಿ ನಿಲ್ಲಬೇಕೇ..?’

ನವದೆಹಲಿ: ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ನಿಲ್ಲದಿದ್ದರೆ ದೇಶಪ್ರೇಮಿಗಳಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಹಾಡಬೇಕೆಂಬ ರಾಷ್ಟ್ರಧ್ವಜ ನಿಯಮಾವಳಿಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

2016 ರ ನವೆಂಬರ್ 30 ರಂದು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದು ಕಡ್ಡಾಯವಾಗಿದೆ. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದುನಿಲ್ಲಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಡಿಸೆಂಬರ್ 30 ರಂದು ಅಂಗವಿಕಲರು ಎದ್ದು ನಿಲ್ಲಬೇಕಿಲ್ಲ ಎಂದು ತಿಳಿಸಲಾಗಿತ್ತು.

ಈ ಆದೇಶದ ಪ್ರಭಾವಕ್ಕೆ ಒಳಗಾಗದೇ ನಿಯಮಾವಳಿ ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ. ಖನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚನೆ ನೀಡಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿ, ಬಹು ಸಂಸ್ಕೃತಿಯ ರಾಷ್ಟ್ರವಾಗಿರುವ ಭಾರತದಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಬೇಕು ಎಂದು ಹೇಳಿದ್ದಾರೆ.

ಜನ ದೇಶಪ್ರೇಮಿ ಎಂದು ತೋರಿಸಿಕೊಳ್ಳಲು ಸಿನಿಮಾ ಮಂದಿರದಲ್ಲಿ ನಿಲ್ಲಬೇಕಿಲ್ಲ. ನಿಲ್ಲದವರು ದೇಶಪ್ರೇಮಿಗಳು ಅಲ್ಲವೇ? ಬಹಿರಂಗವಾಗಿ ದೇಶಪ್ರೇಮವನ್ನು ಪ್ರದರ್ಶಿಬೇಕಿದೆಯೇ ಎಂದು ಪೀಠ ಪ್ರಶ್ನಿಸಿದೆ.

ರಾಷ್ಟ್ರಗೀತೆ ಕಡ್ಡಾಯ ಆದೇಶ ಪ್ರಶ್ನಿಸಿದರೆ, ದೇಶದ್ರೋಹಿ ಎಂದೆನಿಸಿಕೊಳ್ಳುವ ಭೀತಿ ಜನರಲ್ಲಿದೆ. ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದೆ.

ಸಿನಿಮಾ ಮಂದಿರ ಮನರಂಜನೆಯ ತಾಣವಾಗಿದ್ದು, ಅಲ್ಲಿ ಮೂಲಭೂತ ಕರ್ತವ್ಯ ಪಾಲಿಸುವಂತೆ ಸರ್ಕಾರವೇ ನಿಯಮ ರೂಪಿಸಲಿ. ಕೋರ್ಟ್ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...