alex Certify
ಕನ್ನಡ ದುನಿಯಾ       Mobile App
       

Kannada Duniya

ಠೇವಣಿ ವಿಚಾರದಲ್ಲಿ ಆರ್ ಬಿ ಐ ಯುಟರ್ನ್

1481917233-0287

ಹಳೆ ನೋಟುಗಳನ್ನಿಟ್ಟುಕೊಂಡವರು ನಿಟ್ಟುಸಿರು ಬಿಡಬಹುದು. ಆರ್ ಬಿ ಐ ಡಿಸೆಂಬರ್ 19ರಂದು ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆದಿದೆ. ಸಾರ್ವಜನಿಕರು ಎಷ್ಟು ಬಾರಿ ಎಷ್ಟು ಮೊತ್ತವನ್ನು ಬೇಕಾದ್ರೂ ಬ್ಯಾಂಕ್ ಗೆ ಠೇವಣಿ ಇಡಬಹುದಾಗಿದೆ.

ಡಿಸೆಂಬರ್ 19 ರಂದು ಆರ್ ಬಿ ಐ ಬ್ಯಾಂಕ್ ನಲ್ಲಿ ಹಣ ಜಮಾ ಮಾಡುವ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿತ್ತು. 5 ಸಾವಿರಕ್ಕಿಂತ ಹೆಚ್ಚು ಹಳೆ ನೋಟುಗಳನ್ನು ಒಮ್ಮೆ ಮಾತ್ರ ಜಮಾ ಮಾಡಬಹುದೆಂದು ಸೂಚಿಸಿತ್ತು. ಆದ್ರೆ ಆರ್ ಬಿ ಐ ಈ ಆದೇಶ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವಿರೋಧಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರ್ ಬಿ ಐ ಯೂ ಟರ್ನ್ ತೆಗೆದುಕೊಂಡಿದೆ. ತನ್ನ ನಿಯಮವನ್ನು ಬದಲಾಯಿಸಿದೆ.

ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ 5 ಸಾವಿರಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಎಷ್ಟು ಬಾರಿ ಬೇಕಾದ್ರೂ ಬ್ಯಾಂಕ್ ಗೆ ಹೋಗಿ ಹಣ ಜಮಾ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...