alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಮೋದಿ ಫಿಟ್ನೆಸ್ ವಿಡಿಯೋ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯಿಂದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಯೋಗಾಭ್ಯಾಸದ ವಿಡಿಯೋ ಒಂದನ್ನ ಜೂನ್ 13ರಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಈಗ ಆ ವಿಡಿಯೋ ರಾಷ್ಟ್ರ ರಾಜಧಾನಿಯಲ್ಲಿ ವಿವಾದವೊಂದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಈ ವಿಡಿಯೋಗಾಗಿಯೇ ಮೋದಿ 35 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಆರೋಪವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿದ್ದರು. 35 ಲಕ್ಷಕ್ಕೆ ಸೂಚಕವಾಗಿ 35 ಕುರಿಗಳು ಅನ್ನೋ ಪದವನ್ನ ಬಳಕೆ ಮಾಡಿ ಮೋದಿಯವರ ವಿರುದ್ಧ ಆರೋಪ ಮಾಡಿದ್ದರು.

ಯೋಗ ದಿನದ ಪ್ರಮೋಶನ್ ಗಾಗಿ 21 ಲಕ್ಷ ರೂಪಾಯಿಯನ್ನ ಖರ್ಚು ಮಾಡಿದ್ದಾರೆ ಅನ್ನೋ ಆರೋಪವನ್ನ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಶಶಿ ತರೂರ್ ಅವರ ಹೇಳಿಕೆಯನ್ನ ಖಂಡಿಸೋಕೆ ನಿಂತಿದ್ದಾರೆ ಕೇಂದ್ರದ ಮಾಹಿತಿ ಮತ್ತು ಪ್ರಸರಣ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್.

ಶಶಿ ತರೂರ್ ಅವರ ಟ್ವೀಟ್ ಟೀಕೆಗೆ ಪ್ರತಿಯಾಗಿ ರಾಥೋಡ್ ಅವರದ್ದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಮಾಹಿತಿ ಮತ್ತು ಪ್ರಸರಣ ಇಲಾಖೆ ಮಾಹಿತಿ ಪ್ರಕಾರ ವಿಡಿಯೋ ಚಿತ್ರೀಕರಣಕ್ಕೆ ಒಂದೇ ಒಂದು ಕುರಿಯೂ ಖರ್ಚಾಗಿಲ್ಲ ಸರ್ ಅಂತ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಶಶಿ ತರೂರ್ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ನಡುವೆ ಅನೇಕ ಟ್ವೀಟ್ಗಳು ಎಕ್ಸ್ಚೇಂಜ್ ಆಗಿದೆ. ಇವರಿಬ್ಬರ ಟ್ವಿಟ್ಟರ್ ವಾರ್ ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತೋ..?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...