alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ದೇಹದ ಮಗ್ಗುಲಲ್ಲೇ 3 ದಿನ ಕಳೆದ ವೈದ್ಯ…!

ಕೋಲ್ಕತ್ತಾ: ವೈದ್ಯರೊಬ್ಬರು ಸಹೋದರಿಯ ಶವದ ಮಗ್ಗುಲಲ್ಲೇ 3 ದಿನ ಕಳೆದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೆರಿಯಾದಲ್ಲಿ ನಡೆದಿದೆ.

ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ವೃದ್ಧ ವೈದ್ಯರೊಬ್ಬರು 3 ದಿನ ಮೃತದೇಹದೊಂದಿಗೆ ಕಳೆದಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಬುಧವಾರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

70 ವರ್ಷ ವಯಸ್ಸಿನ ನೀಲ್ ಮಣಿ ದಾರಾ ಅವರು ತಮ್ಮ ಸಹೋದರಿ ಕರಾಬಿ ಅವರೊಂದಿಗೆ ವಾಸಿಸುತ್ತಿದ್ದರು. ಅವರ ಮತ್ತೊಬ್ಬ ಸಹೋದರಿ ಪುರಬಿ ಕೂಡ ಜೊತೆಗಿದ್ದರು. ಈ ಮೂವರೂ ಮದುವೆಯಾಗಿರಲಿಲ್ಲ.

ಅನಾರೋಗ್ಯದ ಕಾರಣ ಕರಾಬಿ ಅವರನ್ನು ಡಿಸೆಂಬರ್ 24 ರಂದು ಉಲುಬೆರಿಯಾ ಉಪ ವಿಭಾಗೀಯ ಆಸ್ಪತ್ರೆ ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ, ಡಿಸೆಂಬರ್ 25 ರಂದು ಮೃತದೇಹವನ್ನು ಮನೆಗೆ ತರಲಾಗಿದೆ.

ನೆರೆ ಹೊರೆಯವರು ಸಹಾಯಕ್ಕೆ ಮುಂದಾದರೂ, ನೀಲ್ ಮಣಿ ದಾರಾ ಸಹಾಯ ಪಡೆಯಲು ನಿರಾಕರಿಸಿದ್ದಾರೆ. ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಶವದ ದುರ್ವಾಸನೆ ತಡೆಯಲಾಗದೇ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊನೆಗೆ ಪೊಲೀಸರು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ನೀಲ್ ಮಣಿ ರಾಜು ವೈದ್ಯಕೀಯ ಕಾಲೇಜ್ ನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲಿ ನಡೆದ ಅಕ್ರಮದ ಕಾರಣಕ್ಕೆ ಅವರ ಪಿಂಚಣಿಯನ್ನು ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿ ಅವರು ತಮ್ಮ ಆಸ್ತಿಯನ್ನು ಮಾರಿಕೊಂಡಿದ್ದರು. ಸ್ಥಳೀಯರು ನೆರವು ನೀಡಲು ಮುಂದಾಗಿದ್ದರೂ, ಅವರು ಸಹಕಾರ ಪಡೆಯಲು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...