alex Certify
ಕನ್ನಡ ದುನಿಯಾ       Mobile App
       

Kannada Duniya

ರೋಮಿಯೋಗಳಿಗೆ ತಲೆ ಬೋಳಿಸುವಂತಿಲ್ಲ, ಮಸಿ ಬಳಿಯುವಂತಿಲ್ಲ

rules

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದ ಮೇಲೆ ರಚನೆಯಾಗಿರುವ ಆ್ಯಂಟಿ ರೋಮಿಯೋ ದಳ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆ್ಯಂಟಿ ರೋಮಿಯೋ ದಳಕ್ಕೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ನೀಡಿದೆ.

ಆ್ಯಂಟಿ ರೋಮಿಯೋ ಕಾರ್ಯಾಚರಣೆ ವೇಳೆ ಪೋಲಿಗಳಿಗೆ ತಲೆ ಬೋಳಿಸುವಂತಿಲ್ಲ, ಮಸಿ ಬಳಿಯುವಂತಿಲ್ಲ. ಜೊತೆಗೆ ಕುಕ್ಕರಗಾಲಿನಲ್ಲಿ ಕೂರಿಸುವಂತಿಲ್ಲ ಅಂತಾ ಡಿಜಿಪಿ ಜಾವೇದ್ ಅಹ್ಮದ್ ತಿಳಿಸಿದ್ದಾರೆ. ಆ್ಯಂಟಿ ರೋಮಿಯೋ ದಳದಲ್ಲಿ ಹಲವು ಮಹಿಳಾ ಪೊಲೀಸರು ಕೂಡ ಇದ್ದಾರೆ. ಸಮವಸ್ತ್ರದ ಬದಲು ಸಾಮಾನ್ಯ ಉಡುಪಿನಲ್ಲಿ ಕಾರ್ಯಾಚರಣೆಗಿಳಿಯುತ್ತಾರೆ. ಕಾಫಿ ಶಾಪ್ ಗಳಲ್ಲಿ ಅಥವಾ ಪಾರ್ಕ್ ಗಳಲ್ಲಿ ಇರುವ ಪ್ರೇಮಿಗಳಿಗೆ ಯಾವುದೇ ರೀತಿಯ ತೊಂದರೆ ಕೊಡುವಂತಿಲ್ಲ ಅಂತಾ ಡಿಜಿಪಿ ಸ್ಪಷ್ಟಪಡಿಸಿದ್ದಾರೆ.

ಜಾತಿ, ಮತ, ನಂಬಿಕೆಗಳ ಆಧಾರದ ಮೇಲೆ ಕೂಡ ಯಾವುದೇ ತಾರತಮ್ಯ ಮಾಡುವುದಿಲ್ಲ. ಪ್ರತಿನಿತ್ಯ ಕಾರ್ಯಾಚರಣೆಗೆ ಹೊರಡುವ ಮುನ್ನ ಆ್ಯಂಟಿ ರೋಮಿಯೋ ದಳದ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸಲಹೆ- ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಾರೆ. ಮಹಿಳೆಯರ ಸುರಕ್ಷತೆಗಾಗಿಯೇ 2 ವಾರಗಳ ಹಿಂದೆ ಆ್ಯಂಟಿ ರೋಮಿಯೋ ದಳವನ್ನು ರಚಿಸಲಾಗಿದೆ.

ಅಮಾಯಕರಿಗೆ ತೊಂದರೆ ಕೊಡದಂತೆ ಖುದ್ದು ಸಿಎಂ ಯೋಗಿ ಸೂಚಿಸಿದ್ರು. ಆದ್ರೂ ಕೆಲ ಪೊಲೀಸರು ಪ್ರೇಮಿಗಳನ್ನು, ಅಣ್ಣ-ತಂಗಿಯನ್ನು ಠಾಣೆಗೆ ಕರೆತಂದು ಕಿರುಕುಳ ನೀಡಿರೋದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...