alex Certify
ಕನ್ನಡ ದುನಿಯಾ       Mobile App
       

Kannada Duniya

ಜೀನ್ಸ್, ಸ್ಕರ್ಟ್ ತೊಟ್ಟವರಿಗೆ ಇಲ್ಲಿಲ್ಲ ಪ್ರವೇಶ..!

NO JEANS SKIRTನೀವೇನಾದ್ರೂ ಉಜ್ಜಯನಿಯ ಜೈನ ದೇವಾಲಯ ನೋಡಲು ಹೊರಟಿದ್ರೆ ಜೀನ್ಸ್ ಅಥವಾ ಸ್ಕರ್ಟ್ ತೊಟ್ಟುಕೊಂಡು ಹೋಗಲೇಬೇಡಿ. ಸೀರೆ, ಚೂಡಿದಾರ್, ಲಂಗ ದಾವಣಿ ಅಥವಾ ಭಾರತೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ಹೋದ್ರೆ ಮಾತ್ರ ನಿಮಗೆ ದೇವಾಲಯದೊಳಕ್ಕೆ ಎಂಟ್ರಿ.

ಹೌದು, 8 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರೆಲ್ಲ ಜೀನ್ಸ್, ಸ್ಕರ್ಟ್, ಟಾಪ್ ನಂತಹ ಪಾಶ್ಚಿಮಾತ್ಯ ಬಟ್ಟೆ ಧರಿಸಿ ಬಂದ್ರೆ ಅವರಿಗೆ ಪ್ರವೇಶ ನಿಷೇಧಿಸಲು ಉಜ್ಜಯನಿಯ ಜೈನ ದೇವಾಲಯವೊಂದರ ಆಡಳಿತ ಮಂಡಳಿ ತೀರ್ಮಾನಿಸಿದೆ.

ಶ್ವೇತಾಂಬರ ಜೈನ ಸಮಾಜದ ರಿಷಭದೇವ್ ದೇವಾಲಯ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ಧಿರಿಸಿನಲ್ಲಿ ಬಂದ್ರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಅಂತಾ ಆಡಳಿತ ಮಂಡಳಿ ಮುಖ್ಯಸ್ಥ ಮಹೇಂದ್ರ ಸಿರೋಲಿಯಾ ತಿಳಿಸಿದ್ದಾರೆ. ಅಷ್ಟೇ ಅಲ್ಲ ದೇವಾಲಯದೊಳಕ್ಕೆ ಎಂಟ್ರಿಯಾಗುವ ವೇಳೆ ತಲೆಯ ಮೇಲೆ ಹಾಕಿಕೊಳ್ಳಲು ಹುಡುಗಿಯರಿಗೆಲ್ಲ ಚುನರಿಯೊಂದನ್ನು ಕೊಡಲಾಗುತ್ತದೆ.

ಪಾಶ್ಚಿಮಾತ್ಯ ಉಡುಪುಗಳು ದೇವಾಲಯದ ಘನತೆಗೆ ಕುಂದು ತರುತ್ತವೆ ಎಂಬ ಕಾರಣಕ್ಕೆ ಈ ನಿಯಮ ಜಾರಿ ಮಾಡಲಾಗಿದೆ. ಇದನ್ನು ಪಾಲಿಸುವಂತೆ ಭಕ್ತರಲ್ಲಿ ಮನವಿ ಮಾಡುತ್ತೇವೆ ಅಂತಾ ಮಹೇಂದ್ರ ಸಿರೋಲಿಯಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...